Sahaneya Teru

160.00
Categories: ,
Author: Sudha Bhandari (Suvidha)
160.00

 

ವೈಚಾರಿಕ ಪ್ರಬಂಧದಲ್ಲಿ ಬುದ್ದಿ ಪ್ರಖರವಾಗಿದ್ದಷ್ಟೂ
ಪ್ರಬಂಧ ಗಟ್ಟಿಯಾಗುವುದು. ಕತೆಯಲ್ಲಿ ಭಾವ
ಪ್ರಬಲವಾಗಿದ್ದಷ್ಟೂ ಕತೆ ಜೀವಂತವಾಗುವುದು.
ಒಂದು ಬುದ್ದಿ ಪ್ರಧಾನವಾದರೆ ಇನ್ನೊಂದು ಭಾವ
ಪ್ರಧಾನ. ಅಲ್ಲಿ ವಿಷಯ ವಿಶ್ಲೇಷಣೆ, ಇಲ್ಲಿ ಘಟನೆಗಳ
ವರ್ಣನೆ ಮುಖ್ಯವೆನಿಸುತ್ತದೆ. ಕತೆಗಾರಿಕೆಯ
ಆರಂಭದಲ್ಲಿ ಕತೆಯು ಒಂದು ಘಟನೆಯ
ವರದಿಯಂತೆ ಚಿತ್ರಣಗೊಳ್ಳುತ್ತದೆ. ಉತ್ತಮ
ಕತೆಗಾರರು ಈ ಹಂತವನ್ನು ದಾಟಿ ಮುಂದೆ
ಹೋಗಬೇಕಾಗುತ್ತದೆ. ಕಥಾ ರಚನೆಯ ತಂತ್ರದಲ್ಲಿ
ಹೊಸತನವನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಪ್ರಬಂಧದಲ್ಲಾದರೆ ಆಯ್ದ ವಿಷಯವು ಒಳಗೊಳ್ಳುವ
ಎಲ್ಲ ಸಂಗತಿಗಳನ್ನು ಪ್ರಬಂಧಕಾರ ವಿವರಿಸಬೇಕು.
ಆದರೆ ಕತೆಯಲ್ಲಿ ಪ್ರತಿ ಸಂಗತಿಯನ್ನೂ ಕತೆಗಾರರೇ
ಹೇಳಬೇಕಾಗಿಲ್ಲ.
ಭಾವಕೋಶಕ್ಕೆ
ಕೆಲವೊಂದನ್ನು
ಬಿಡಬೇಕಾಗುತ್ತದೆ.
ಓದುಗರ
ಅಂದರೆ
ವಿಷಯವನ್ನು ವಾಚ್ಯವಾಗಿಸದೇ ಸಾಂಕೇತಿಕವಾಗಿ,
ಸೂಚ್ಯವಾಗಿ ಧ್ವನಿಸಬೇಕು.
ಸುಧಾ ಭಂಡಾರಿಯವರ ಕಥಾ ಸಂಕಲನ ‘ಸಹನೆಯ
ತೇರು’ ದಲ್ಲಿ 12 ಕತೆಗಳಿವೆ. ಇವುಗಳಲ್ಲಿ 7 ಕತೆಗಳು
ನೇರವಾಗಿ ದಾಂಪತ್ಯ ಜೀವನವನ್ನೇ ಕೇಂದ್ರೀಕರಿಸಿದೆ.
ಕತೆಯ ನಿರೂಪಣೆ ಒಂದೇ ಅಚ್ಚಿನಲ್ಲಿ ಎರಕ
ಹೊಯ್ದಂತಿದ್ದರೂ ಇಲ್ಲಿ ಬಿಂಬಿತವಾದ ಸಮಸ್ಯೆಗಳು
ಬೇರೆ ಬೇರೆ ಇವೆ. ‘ಮನ್ವಂತರ’ ಕತೆಯಲ್ಲಿ ಮಾತ್ರ
ನಾಯಕಿ ಶಾರದಾ ದೇವರ ಪೂಜೆ ಪುನಸ್ಕಾರಗಳೇ
ಶ್ರೇಷ್ಠವೆಂದು ಭಾವಿಸಿ ಗಂಡನ ಅಪೇಕ್ಷೆಗಳನ್ನು
ಉಪೇಕ್ಷೆ ಮಾಡಿ, ಗಂಡನು ಮತ್ತೊಂದು
ಮದುವೆಯಾಗಲು ಕಾರಣಳಾಗುತ್ತಾಳೆ. ಉಳಿದೆಲ್ಲ
ಕತೆಗಳಲ್ಲಿ ಗಂಡಸಿನ ದರ್ಪ, ದುರ್ನಡತೆ,
ಕಾಮುಕತೆಯ ದೌರ್ಜನ್ಯದಲ್ಲಿ ಪತ್ನಿಯಾದವಳು
ನೊಂದು ನಲುಗಿ ಹೋಗುವ ಚಿತ್ರಣವಿದೆ.

 

In a conceptual essay, the stronger the mind, the stronger the essay. The stronger the emotion in the story, the more alive the story becomes. One is intellect dominant while the other is emotional. There content analysis, here description of events is important. In the beginning the story looks like an incident report. Good storytellers have to move past this stage. Innovation has to be practiced in the technique of plotting.
In an essay, the essayist should explain all the facts that the selected topic covers. But the storyteller does not have to tell everything in the story. Some should be left for the pocket. The meaning of the reader should be expressed figuratively and implicitly without making it literal.
Patience

Sudha Bhandari’s short story collection ‘Sahane Theru’ has 12 stories. 7 of these stories directly focus on married life. Although the narration of the story seems to be cast in the same mold, the issues depicted here are different. Only in the story of ‘Manvantara’ does the heroine Sharada neglect her husband’s wishes, thinking that the worship of God is the best and causes him to marry again. In all the other stories, there is a picture of the wife getting crushed by the man’s greed, misbehavior, sexual abuse.

Reviews

There are no reviews yet.

Only logged in customers who have purchased this product may leave a review.