Ramya Chaitra Kaala

300.00
Categories: ,
Author: Shekar Gowda V

 

ಶೇಖರಗೌಡ ವೀ ಸರನಾಡಗೌಡರ್ ಅವರು ನಾಡಿನ ಜನಪ್ರಿಯ
ಬರಹಗಾರರೊಲ್ಲಬ್ಬರು. ಅವರ ಅನೇಕ ಕಥೆಗಳು, ಅಂದರೆ ನೂರಾರು
ಕಥೆಗಳು ಸುಧಾ, ತರಂಗ, ಮಂಗಳ, ಕರ್ಮವೀರ ವಾರ ಪತ್ರಿಕೆಗಳೂ
ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡು ಅಸಂಖ್ಯ ಓದುಗರ
ಪ್ರಶಂಸೆಗೆ ಒಳ ಪಟ್ಟಿವೆ. ಅಂತೆಯೇ ಅವರ ಬಹುತೇಕ ಕಾದಂಬರಿಗಳೂ
ಕೂಡ ವಿವಿಧ ಪತ್ರಿಕೆಗಳಲ್ಲಿ ಧಾರಾವಾಹಿ ರೂಪದಲ್ಲಿ ಬೆಳಕು ಕಂಡಿವೆ.
ಬಟವೆಂದರೆ ಅವರ ಶೈಲಿಯೇ ವಿಭಿನ್ನ, ಹೇರಳ ಪದಪುಂಜವನ್ನು ತಮ್ಮ
ಸಮಗ್ರ ಬರಹಗಳಲ್ಲಿ ಧಾರೆಯೆರೆದಿದ್ದಾರೆ ಎಂದರೆ ಅದು
ಅತಿಶಯೋಕ್ತಿಯಂತೂ ಅಲ್ಲವೇ ಅಲ್ಲ.
ಹೊಲ, ಗದ್ದೆ, ತೋಟಗಳಲ್ಲಿ ನಡು ಬಗ್ಗಿಸಿ ಗುದ್ದಲಿ ಹಿಡಿಯುವ ಗೌಡರ್
ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ನಿರಾಯಾಸವಾಗಿ ಕೃಷಿ ಮಾಡಿದ್ದಾರೆ.
ಐವತ್ತೈದು ವರ್ಷಗಳ ನಂತರ ಸಾಹಿತ್ಯ ಕೃಷಿಯಲ್ಲಿ ಮತ್ತು ಅರವತ್ತರ
ವಸಂತಗಳ
ನಂತರ ಭೂಮಿಯಲ್ಲಿ ಕೃಷಿ ಮಾಡುತ್ತ
ಲವಲವಿಕೆಯೊಂದಿಗೇ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು
ಯಶಸ್ಸು ಸಾಧಿಸಿದವರು, ‘ರಮ್ಯ ಚೈತ್ರಕಾಲ’ ఎంబ ఈ
ಕಾದಂಬರಿಯನ್ನು ಅತ್ಯಂತ ಪ್ರೀತಿಯಿಂದ ಪ್ರೇಮಿಗಳ ಸುತ್ತ ಹೆಣೆದಿದ್ದಾರೆ.
ಇಲ್ಲಿ ವಾಸ್ತವತೆಯಿದೆ ಜಾತಿ, ಧರ್ಮದ ಗೋಡೆಗಳನ್ನು ಕೆಡವಿ
ಮಾನವೀಯತೆಯ ನೆಲೆಯಲ್ಲಿ ತಮ್ಮದೇ ಸಿದ್ಧಾಂತವನ್ನು
ಪ್ರತಿಪಾದಿಸುತ್ತಾರೆ. ಸಾಮಾಜಿಕ ತಲ್ಲಣಗಳು, ಹದಿಹರೆಯದವರ
ಧಾವಂತಗಳು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ಓದುಗರನ್ನು
ಕುತೂಹಲದಲ್ಲಿ ಹಿಡಿದಿಟ್ಟುಕೊಂಡು ಚಿಂತನೆಗೆ ಹಚ್ಚಿಸುತ್ತಾರೆ.
ಶೇಖರಗೌಡ ವೀ ಸರನಾಡಗೌಡರ್ ರವರು ಪ್ರಸ್ತುತ ಕಾದಂಬರಿಯಲ್ಲಿ
ಮಾನವೀಯ ಮೌಲ್ಯಗಳನ್ನು ಅನಾವರಣಗೊಳಿಸಿದ್ದಾರೆ.

 

Shekar Gowda V Saranad Gowder is one of the popular writers of the country. Many of his stories, i.e. hundreds of stories, have been published in many newspapers including Sudha, Tharanga, Mangala, Karmaveera Vara and have been praised by countless readers. Similarly, most of his novels have also seen light in serial form in various magazines.

What is bold is that his style is different, and the abundance of words he has poured into his comprehensive writings is not an exaggeration. Gowdar, who bends his waist and holds a hoe in fields, paddies and orchards, has cultivated effortlessly in the field of literature as well.
After fifty-five years in literary cultivation and after sixty years in the land, he engaged himself in literature with enthusiasm and success, has woven this novel ‘Ramya Chaitrakala’ around lovers with great love. Here is the reality that they tear down the walls of caste, religion and assert their own ideology on the basis of humanity. Social angsts, teenage rushes with his unique style of writing keeps the reader intrigued and thought provoking. Shekar Gowda V Saranad Gowder has unveiled humanistic values ​​in the present novel

Reviews

There are no reviews yet.

Only logged in customers who have purchased this product may leave a review.