Nirnaya

150.00
Categories: ,
Author: Dr. K. Rajeshwari Gowda
150.00

 

ದಿಟ್ಟ ನಿಲುವು, ನಿರ್ಧಾರಗಳ ಹುಡುಗಿ…. ಗೆಳೆಯ, ಡಾ. ದೊಡ್ಡರಂಗೇಗೌಡರ ಕವಿ
ಹೃದಯಕ್ಕೆ ಮಾರುಹೋಗಿ, ಒಲಿದು ಮನೆ ತುಂಬಿದ ಜಾಣೆ ಎಂದು ಮಾತ್ರ ಡಾ. ಕೆ.
ರಾಜೇಶ್ವರಿಗೌಡ ಅವರ ಬಗ್ಗೆ ತಿಳಿದಿತ್ತು. ಒಂದೆರಡು ಬಿಡಿ ಬರಹ, ಕವನಗಳನ್ನು ಓದಿದ್ದ
ನೆನಪು. ಆಕೆ ಒಳ್ಳೆಯ ಕತೆಗಾರ್ತಿಯೂ ಹೌದೆನ್ನುವುದು ತಿಳಿದಿದ್ದು ಈ ಸಂಕಲನದಲ್ಲಿಯ
ಕಥೆಗಳ ಹಸ್ತಪ್ರತಿ ನನ್ನ ಕೈಗೆ ಬಂದಾಗಲೇ! ಕಥೆಗಳನ್ನು ಓದುತ್ತಾ ಹೋದಂತೆ. ಆಕೆಯ
ಕಾಳಜಿಗಳನ್ನು ಕಂಡು ಖುಷಿಯಾಯಿತು. ಆಕೆ ಮತ್ತಷ್ಟು ಹತ್ತಿರವಾದರು.
ಬಾಳಿನ ಬಗೆಗಿನ ನಂಬಿಕೆ. ಜೀವನವನ್ನು ಬೆಳೆಸಬೇಕಾದ. ಬದುಕಲು ಅವಶ್ಯಕವಾಗುವ
ಹಾಗೆ ಅದನ್ನು ರೂಪಿಸಬೇಕೆಂಬ ವಾಂಛ ತುಂಬಾ ಸ್ಪಷ್ಟವಾಗಿ ಇಲ್ಲಿಯ ಕಥೆಗಳಲ್ಲಿ
ಕಂಡುಬರುತ್ತದೆ. ಡಾ. ಕೆ. ರಾಜೇಶ್ವರಿಗೌಡ ಅವರು ಉದ್ವೇಗವಿಲ್ಲದೆ ಕಥೆ ಹೇಳುವ ವಿಧಾನ
ಎಂಥ ಓದುಗನಿಗೂ ಮೆಚ್ಚುಗೆಯಾಗುತ್ತದೆ.
ವಸ್ತು ಯಾವ ಕಾಲದ್ದೇ ಆದರೂ ಎಲ್ಲ ಕಾಲಕ್ಕೂ ಸಲ್ಲುವಂತೆ ಡಾ. ಕೆ. ರಾಜೇಶ್ವರಿಗೌಡ
ಬರೆಯುತ್ತಾರೆ. ಚೊಕ್ಕ-ಸರಳ ಅನ್ನಿಸುವ ಭಾಷೆ; ಪುಟ್ಟ ಪುಟ್ಟ ವಾಕ್ಯಗಳು; ಹೇಳುವ ಪ್ರತಿ
ಮಾತಿನಲ್ಲೂ ನಿಖರತೆ ಇರುವ ಡಾ. ಕೆ. ರಾಜೇಶ್ವರಿಗೌಡ ಅವರ ನಿರೂಪಣೆಗೆ ಒಂದು
ಸೊಗಸಾದ ಚಿತ್ರಕ ಶಕ್ತಿಯಿದೆ. ಆ ಶೈಲಿ ಪಾತ್ರಗಳನ್ನು ನಮ್ಮ ಕಣ್ಣಮುಂದೆ
ಸುಳಿದಾಡಿಸಬಲ್ಲದು.
ಇಲ್ಲಿನ ರಚನೆಗಳ ಹಿನ್ನೆಲೆಯಲ್ಲಿ ಸಮಾಜದ ಅನೇಕ ಸ್ಥಾವರ ಮೌಲ್ಯಗಳನ್ನು
ಒಪ್ಪದಿರುವ, ಇಚ್ಛೆ ಹಂಬಲಗಳ ಸ್ವಾತಂತ್ರ್ಯವನ್ನು ಪಡೆಯಲಾಗದ, ಸಮಾಜದಲ್ಲಿನ
ಸನ್ನಿವೇಶಗಳನ್ನು ಎದುರಿಸುವ ಪ್ರವೃತ್ತಿಯೇ ಸಂಸ್ಕೃತಿಯ ಒಂದು ಅಂಗವಾಗಿ
ರೂಪಗೊಳ್ಳವೇಕೆ? ಎಂಬುದು ಲೇಖಕಿಯ ಅಪೇಕ್ಷೆ, ಈ ಅಭೀಪ್ಪೆ ಕಥೆಗಳ ಒಳಗಿನ ಅನೇಕ
ಸಾಲುಗಳಲ್ಲಿ ಧ್ವನಿಸುತ್ತದೆ. ಇದಕ್ಕಾಗಿ ಲೇಖಕಿಯನ್ನು ಅಭಿನಂದಿಸುತ್ತೇನೆ.

 

A girl with a strong attitude, decisions…. Boyfriend, Dr. Dr. Doddarange Gowda’s poet was captivated by his heart and filled the house full of tears. K. Rajeshwarigowda knew about him. I remember reading a couple of odd writings and poems. I knew she was a good storyteller when I got the manuscript of the stories in this collection! As the stories go on. Glad to see her concerns. She came closer.
The belief in life, the desire to cultivate life, to make it necessary for living is very clearly seen in the stories here. Dr. K. Rajeshwari Gowda’s way of telling the story without tension will be appreciated by any reader.

No matter what time the material is, Dr. K. Rajeshwari Gowda writes. The language that seems short and simple: little sentences: Dr. who is precise in every word he says. K. Rajeshwari Gowda’s narration has an exquisite pictorial power. S style can make characters hover before our eyes.

In the background of the structures here, the tendency to not agree with many established values ​​of the society, to not get the freedom of desires, and to face the situations in the society should be formed as a part of the culture? It is the desire of the author. This refrain is echoed in many lines within the stories. Kudos to the author for this.

Reviews

There are no reviews yet.

Only logged in customers who have purchased this product may leave a review.