Kannadada Deepagalu

350.00
Categories: ,
Author: Suresh Guduga
ಸುರೇಶ ಗುದಗನವರ
ಸಂಖ್ಯಾಶಾಸ್ತ್ರಕ್ಕೂ ಸಾಹಿತ್ಯಕ್ಕೂ ಏನಾದರೂ ಸಂಬಂಧ ಇದೆಯೇ ಎಂದು ಕೇಳಿದರೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಯಾರಾದರೂ ಕೇಳಬಹುದು. ಆದರೆ, ಯಾಕೆ ಸಂಬಂಧ ಇರಬಾರದು ಎಂದು ಕೇಳುವಂತೆ ಸುರೇಶ ಗುದಗನವರ ಪಾಠ ಮಾಡಿದ್ದಾರೆ, ಪುಸ್ತಕ ಬರೆದಿದ್ದಾರೆ. ಸಾಹಿತ್ಯ ಎನ್ನುವುದು ಒಂದು ಆಸಕ್ತಿ. ಅದಕ್ಕೂ ನಾವು ಪಡೆದುಕೊಳ್ಳುವ ಪದವಿಗೂ ಅಂಥ ಸಂಬಂಧ ಇರುವುದಿಲ್ಲ. ಓದುವುದು ಮತ್ತು ಬರೆಯುವುದು ಬಾಲ್ಯದಲ್ಲಿಯೇ ನಮ್ಮಲ್ಲಿ ಬೆಳೆಯುವ ಆಸಕ್ತಿಗಳು. ಗುದಗನವರಿಗೂ ಅವರು ಇನ್ನೂ ಏಳನೆಯ ತರಗತಿಯಲ್ಲಿ ಇರುವಾಗಲೇ ಬರವಣಿಗೆಯಲ್ಲಿ ರುಚಿ ಮೂಡಿತು. ಬೆಳೆವ ಸಿರಿ
ಮೊಳಕೆಯಲ್ಲಿ ಎನ್ನುವ ಹಾಗೆ ಮುಂದೆ ಈ ಆಸ್ತಕಿಯೇ ಅವರ ಕೈ ಹಿಡಿದು ಕಥೆ, ಅಂಕಣ ಬರೆಯಲು ಪ್ರೇರೇಪಿಸಿದಂತೆ ಕಾಣುತ್ತದೆ. ಗುದಗನವರ ಅವರು ನಿವೃತ್ತಿಯ ನಂತರ ಬರವಣಿಗೆಯಲ್ಲಿ ತೊಡಗಿಕೊಂಡರು. ಅದಕ್ಕೂ ಮುಂಚೆ ಅವರು ಸಾಹಿತ್ಯ ಪರಿಷತ್ತಿನ ಪರಿಚಾರಿಕೆಯಲ್ಲಿ ತಮ್ಮನ್ನೇ ತಾವು ಸಮರ್ಪಿಸಿಕೊಂಡಿದ್ದರು. ಏಕೆಂದರೆ ತಾಲೂಕಿನ ತುಂಬೆಲ್ಲ ಸ್ಕೂಟರ್‌ನಲ್ಲಿ ಸಂಚರಿಸಿ ಸದಸ್ಯರನ್ನು ಮಾಡಿದವರು ಅವರು. ಈ ಬಗೆಯ ಬದ್ಧತೆ ವಿರಳಾತಿವಿರಳ. ಇದೀಗ ಅವರು ನಾಡಿನ
ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಬಗೆ ಬಗೆಯ ಲೇಖನಗಳನ್ನು ಬರೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಬರವಣಿಗೆ ಎನ್ನುವುದು ನಿವೃತ್ತಿ ನಂತರದ ಅವರಿಗೆ ಪೂರ್ಣಾವಧಿ ವೃತ್ತಿಯಾಗಿದೆ ! ಈ ಕೃತಿಯಲ್ಲಿ ಕನ್ನಡ ಭಾಷೆಯ ನಾಡಿನ ಸೇವೆ ಮಾಡಿದ 53 ಸಾಧಕರ ಕುರಿತ ಬರಹಗಳು ಇವೆ.
ವ್ಯಕ್ತಿ ಚಿತ್ರಗಳನ್ನು ಬರೆಯುವುದು ಬಹಳ ಕಷ್ಟ ಎಚ್.ಎಸ್.ಕೆ. ಅವರು ಈ ಬಗೆಯ ಬರವಣಿಗೆಯಲ್ಲಿ ಸಿದ್ದಿ ಪಡೆದ ಒಬ್ಬ ಅಪ್ರತಿಮ ಲೇಖಕರಾಗಿದ್ದರು. ಸುರೇಶ ಅವರು ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಬದುಕಿನ ವಿವಿಧ ರಂಗಗಳಲ್ಲಿ ಕೆಲಸ ಮಾಡಿದ ಗಣ್ಯರನ್ನು ಗುರುತಿಸಿ ಅವರ ಬಗ್ಗೆ ಅತ್ಯಂತ ಪ್ರೀತಿಯಿಂದ ಗುದಗನವರ ಬರೆದಿದ್ದಾರೆ. ಕನ್ನಡದ ಮಣ್ಣಿನಲ್ಲಿ ಇರುವ ಮುಖ್ಯ ಗುಣವಾದ ಅಭಿಮಾನ, ಪ್ರೀತಿ, ಸಜ್ಜನಿಕೆ ಈ ಎಲ್ಲ ಲೇಖನಗಳಲ್ಲಿ ತುಂಬಿ ತುಳುಕುತ್ತಿದೆ. ತೆರೆಯ ಮೇಲೆ ಇರುವವರನ್ನು ಕುರಿತು ಬರೆಯುವವರು ಬಹಳ ಜನ ಇರುತ್ತಾರೆ. ಇನ್ನು ಹಲವರು ತೆರೆಯ ಹಿಂದೆಯೇ ಇರಬೇಕು
ಎಂದು ಬಯಸುತ್ತಾರೆ. ಅಂಥ ಸಂಕೋಚದ ಮುದ್ದೆಗಳನ್ನೂ ಇಲ್ಲಿ ಸುರೇಶ ಅವರು ಗುರುತಿಸಿ ಅವರ ಬಗ್ಗೆ ಬರೆದಿದ್ದಾರೆ.
‘ಕನ್ನಡದ ದೀಪಗಳು’ ಎಂಬ ಈ ಕೃತಿಯ ಹೆಸರೇ ಅನನ್ಯವಾಗಿದೆ. ದೀಪದ ಕೆಲಸ ಅಂಧಃಕಾರವನ್ನು ನಿವಾರಿಸುವುದು. ಬೆಳಕನ್ನು ಈಯುವುದು. ಇಲ್ಲಿ ಕೆತ್ತನೆಯಗೊಂಡಿರುವ 53 ಜೀವಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬಹುದು. ಅವರ ದಾರಿಯಲ್ಲಿ ಕತ್ತಲೆಯನ್ನು, ಕಲ್ಲು ಮುಳ್ಳುಗಳನ್ನು ಈ ಕನ್ನಡದ ದೀಪಗಳು ತೋರಿಸಿ ಸರಿದಾರಿಯಲ್ಲಿ ನಡೆಯುವಂತೆ
ಪ್ರೇರೇಪಿಸಬಹುದು. ಇಂಥ ಒಂದು ಅಪರೂಪದ ಕೃತಿಯನ್ನು ಕನ್ನಡಿಗರ ಕೈಗೆ ಇತ್ತ ಸುರೇಶ ಗುದಗನವರ ಅಭಿನಂದನಾರ್ಹರು.
ಕನ್ನಡದ ದೀಪಗಳು
-ಡಾ. ಪದ್ಮರಾಜ ದಂಡಾವತಿ
ಸಾಹಿತಿಗಳು
By Suresh Gudaga
If asked if numerology has anything to do with literature, one might ask that the elephant is the mamara and the cuckoo is the elephant. However, Suresh has taught Gudaga and written a book to ask why there should not be a relationship. Literature is an interest. It has nothing to do with the degree we get. Reading and writing are interests that develop in us from childhood. Gudaga also developed a taste for writing when he was still in seventh grade. It seems that this author took his hand and inspired him to write a story and a column, like a budding Siri. Gudganavara took up writing after retirement. Before that, she had dedicated herself to serving in Sahitya Parishad. Because he was the one who made the members by traveling on a scooter all over the taluk. This kind of commitment is rare. Now he is writing various articles in many leading newspapers of the country.
There are writings about 53 Sadhaks who have done it. It is very difficult to write person pictures H.S.K. He was a unique writer who excelled in this type of writing. Suresha is on the same path. Gudaganavara has written about the eminent people who have worked in various walks of life with great love. Admiration, love and gentility which are the main qualities of Kannada soil are overflowing in all these articles. There are many people who write about people on screen. Many others prefer to stay behind the scenes. Here Suresha has recognized such lumps of shyness and written about them.
The name of this work ‘Kannada Deepa’ is unique. The function of lamp is to remove darkness. Carrying the light. The 53 lives enshrined here can be a beacon for future generations. These Kannada lights can show the darkness, the stones and thorns in their path and inspire them to walk in the right direction. Suresh Gudagana is to be congratulated for putting such a rare work in the hands of Kannadigas.
Lights of Kannada
-Dr. Padmaraja Dandavati Sahitya

Reviews

There are no reviews yet.

Only logged in customers who have purchased this product may leave a review.