ಪ್ರಾಚೀನ ಪರಂಪರೆಯ ಕಾವ್ಯಶೈಲಿಯಲ್ಲಿ ಪದ್ಯಗಳನ್ನು ರಚಿಸಲು ಮುಂದಾದ ನಿಮಗೆ ಮೊದಲು. ಅಭಿನಂದಿಸುತ್ತೇನೆ.
ಕೈವಾರದ ಯೋಗಿನಾರೇಯಣ ಯತೀಂದ್ರರ ಕುರಿತು ಒಂದು ಸಮಗ್ರವಾದ ಚಿತ್ರಣವನ್ನು ನೀಡಲು ಮಹಿಳೆ ಮುಂದಾಗಿರುವುದು ಇದೇ ಮೊದಲು….! ಸ್ಥಳೀಯ ಐತಿಹ್ಯಗಳನ್ನು ಕುರಿತು ಒಂಬತ್ತು ಪದ್ಯಗಳನ್ನು ಬರೆದಿದ್ದೀರಿ.
ಸರಳ ಸುಂದರವಾಗಿವೆ. ಭಾವಪೂರ್ಣವಾಗಿವೆ. ನೆಲದ ಹಿರಿಮೆ ಗರಿಮೆಗಳನ್ನು ಕಟ್ಟಿಕೊಟ್ಟಿವೆ. ಮುಕ್ತಕದಲ್ಲಿ ಅಪೂರ್ವವಾದಂತಹ ಕ್ರಿಯಾಶೀಲ ಮನೋಭಾವವನ್ನು ವ್ಯಕ್ತಪಡಿಸಿದ್ದೀರಿ….. ನಿಮಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಕಾವ್ಯ ಗಣನೀಯ ಹಾಗೂ ಮನನೀಯ ಕಾವ್ಯವಾಗುತ್ತದೆ. ಕನ್ನಡ ನಾಡಿನಲ್ಲಿ ತನ್ನದೇ ಛಾಪು ಮೂಡಿಸುತ್ತದೆ.. ಕನ್ನಡ ಸಾರಸ್ವತ ಲೋಕದಲ್ಲಿ ಕೈವಾರ ತಾತಯ್ಯನವರ ಈ ಕೃತಿ ದಿಗ್ಗಿಗಂತ ಬೆಳಗಲಿ, ನಿಮಗೆ ಶುಭವಾಗಲಿ.
ಕವಯಿತ್ರಿ ವಿಜಯಾ ಪದ್ಮಶಾಲಿ ಅವರಿಗೆ ಶುಭಕೋರುತ್ತೇನೆ ನಿಮ್ಮ ಸೇವೆ ನಿರಂತರವಾಗಿ ಸಾಗಲಿ. ನಮ್ಮ ನಡುವಿನ
ಗಮನಾರ್ಹವಾದ ಕವಯಿತ್ರಿಯಾಗಿ ಹೊರಹೊಮ್ಮಿದ್ದೀರಿ….
-ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ
ತುಮಕೂರು
Before you came to compose verses in the poetic style of ancient tradition. Congratulations. This is the first time that a woman has come forward to give a comprehensive picture of Yoginareyan Yathindra of Kaiwara….! You have written nine poems on local legends. Simple are beautiful. are soulful. The greatness of the ground has bound the virtues. You have expressed such an active spirit in the Muktaka….. Hearty congratulations to you, your poetry will be substantial and impressive poetry. It will make its own mark in the Kannada land.. May this work of Kaivara Tataiah shine brightly in the Kannada Saraswat world, may you be blessed. Best wishes to Poet Vijaya Padmashali May your service continue. You have emerged as a remarkable poet among us….
– Vidyavachaspati Dr. Kavitakrishna Tumkur
Reviews
There are no reviews yet.