ಎಪ್ಪತ್ತಾರರ ಮೈಲಿಗಲ್ಲಿಗೆ ತಲುಪಿರುವ, ಮುಖ್ಯವಾಗಿ ಕವಿತೆಗಳನ್ನೇ ಬರೆದಿದ್ದರೂ ಸಾಹಿತ್ಯದ ಉಳಿದ ಪ್ರಕಾರಗಳಲ್ಲೂ ಕೃಷಿ
ಮಾಡಿ ನೂರಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿರುವ ಗೌಡರು ಆತ್ಮಕಥನವನ್ನು ಪ್ರಕಟಿಸದೆ ಕೊರತೆಯೊಂದನ್ನು ಉಳಿಸಿಬಿಟ್ಟರಲ್ಲ ಎನ್ನುತ್ತಿದ್ದ ಅಭಿಮಾನಿಗಳಿಗೆ ಸಂತೋಷ ಉಂಟುಮಾಡುವಂತೆ, ಆಸಾಹಸಕ್ಕೆ ಕೈ ಹಚ್ಚಿ ಯಶಸ್ವಿಯಾಗಿರುವುದಕ್ಕಾಗಿ ಗೆಳೆಯ, ಲೇಖಕ ಭದ್ರಾವತಿ ರಾಮಾಚಾರಿ ಅವರನ್ನು ಅಭಿನಂದಿಸಬೇಕಾಗಿದೆ. ಆಸ್ತೇಷ್ಟರ ಬಳಿ ಇಳಿವಯಸ್ಸಿನ ಆತಂಕಗಳನ್ನು ಹೇಳಿಕೊಳ್ಳುತ್ತಿದ್ದರೂ ವಿರಾಮವಿಲ್ಲದಂತೆ ಕವಿತೆಗಳನ್ನು ಬರೆಯುತ್ತಿದ್ದ ಗೌಡರು ತಲೆ
ಕೆಡಿಸಿಕೊಂಡು ಬರೆಯಬೇಕಾದ ಆತ್ಮಕಥನದ ಹಿಂಸೆಗೆ ಹೊರಳುತ್ತಲೇ ಇರಲಿಲ್ಲ. ಅದನ್ನು ಮನಗಂಡೋ ಏನೋ ಭದ್ರಾವತಿ
ರಾಮಾಚಾರಿಯವರು ಗೌಡರ ಮೇಲಿನ ಪ್ರೀತಿ, ಭಕ್ತಿಗೆ ಒಂದು ಬಳುವಳಿ ಎಂಬಂತೆ ಶ್ರದ್ಧಾಪೂರ್ವಕವಾಗಿ ‘ಹಳ್ಳಿ ಹೈದ’ನ ಕಥನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಇನ್ನು ಆತ್ಮಚರಿತ್ರೆ ಬರಲಾರದು ಎಂದೇ ಭಾವಿಸಿದ್ದವರಿಗೆ ಆಶ್ಚರ್ಯ, ಸಂಭ್ರಮಗಳನ್ನು ಉಂಟು ಮಾಡುವಂತೆ, ভেত. ದೊಡ್ಡರಂಗೇಗೌಡರದೇ ಮಾತುಗಳಲ್ಲಿ, ಅವರೇ ಬರೆದಿದ್ದಾರೇನೋ ಎನ್ನಿಸುವಂತೆ, ಓದಿನ ಸುಖ ಲಭ್ಯವಾಗುವಂತೆ ಸುಂದರವಾಗಿಯೂ, ಸೊಗಸಾಗಿಯೂ ಲೇಖಕ ಭದ್ರಾವತಿ ರಾಮಾಚಾರಿ ಅವರು ನಿರೂಪಿಸಿದ್ದಾರೆ.
Having reached the milestone of seventy-six, Gowda, who mainly wrote poems but cultivated other genres of literature and brought out more than a hundred works, has to be congratulated by his friend, author Bhadravati Ramachari for taking up that venture and succeeding to make the fans happy who said that he did not leave a deficit without publishing his autobiography.
Gowda, who used to write poems without a break despite confessing to Apeshtar that he was worried about his age, did not continue to suffer from the torture of the autobiography that he had to write. Mindful of that, Bhadravati Ramachari dedicated the story of ‘Halli Haida’ to the Kannada Saraswat world, as if it were an expression of love and devotion to Gowda. Dr. In the words of Doddarange Gowda, the author Bhadravati Ramachari has narrated it beautifully and elegantly so that the pleasure of reading is available, as if he had written it himself.
Only logged in customers who have purchased this product may leave a review.
Reviews
There are no reviews yet.