ಬೋಳಾಯಣ
ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಹೆಜ್ಜೆ ಇಡುತ್ತಿರುವವರು ಇತ್ತೀಚೆಗೆ ಅಧಿಕವಾಗುತ್ತಿದ್ದಾರೆ. ಬಹುತೇಕರು ಗಂಭೀರ ಸಾಹಿತ್ಯದೆಡೆ ಒಲವು ತೋರುತ್ತಿರುವುದು ಪ್ರಮುಖವಾಗಿ ಕಂಡುಬರುತ್ತಿದೆ. ಹಾಸ್ಯ ಸಾಹಿತ್ಯ ಬರಹಗಾರರ
ಪರಂಪರೆ ದೊಡ್ಡದಿದ್ದರೂ ಅದಕ್ಕೆ ನವ್ಯರು ಗಂಭೀರವಾಗಿ ತೊಡಗಿಸಿಕೊಳ್ಳುತ್ತಿಲ್ಲ ಎಂಬುವುದು ಚುಕ್ಕಿಯಷ್ಟು ಅಸಮಾಧಾನ. ಈ ನಿಟ್ಟಿನಲ್ಲಿ ‘ಬಸವನಗೌಡ ಹೆಬ್ಬಳಗೆರೆ’ರವರು ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯನ್ನು ಹಾಸ್ಯ ಸಾಹಿತ್ಯದೆಡೆ ಎಳೆದೊಯ್ಯುತ್ತಿದ್ದಾರೆ. ಅದರ ಮೊದಲ ಪ್ರಯತ್ನವೇ ‘ಬೋಳಾಯಣ’ ಎಂಬ ಹನಿ ಹಾಸ್ಯಗವನಗಳ ಸಂಕಲನ.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡ ಇವರು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆ
ಸಲ್ಲಿಸುತ್ತ ಶಾಲಾ ಶಿಕ್ಷಕರಿಗೆ ತರಬೇತಿ, ಬರವಣಿಗೆ, ಕವನ, ಚುಟುಕು, ಪ್ರಬಂಧ, ವ್ಯಕ್ತಿತ್ವ ವಿಕಸನ ಬರಹ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಕೆಲವು ಪತ್ರಿಕೆಗಳಿಗೆ ಅಂಕಣ ಬರೆಯುವುದರ ಜೊತೆಗೆ ಅನೇಕ ಪತ್ರಿಕೆಗಳಲ್ಲಿ ಪರಿಸರ, ಶಿಕ್ಷಣ, ಮಾನವ ಸಂಬಂಧಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ. ಇಂತಿಪ್ಪ ಬಸವನಗೌಡ ಹೆಬ್ಬಳಗೆರೆಯವರ ಈ ‘ಬೋಳಾಯಣ’ ಚುಟುಕು
ಕವನಗಳ ಸಂಗ್ರಹ ಓದುಗರನ್ನು ನಕ್ಕು ನಗಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
Baldness
Recently there are more and more people who are taking a new step in the world of Kannada literature. Majority seems to be leaning towards serious literature. Although the legacy of comedy writers is not great, it is very disappointing that Navyas are not seriously involved in it.
In this regard, ‘Basavanagowda Hebbalagere’ being a teacher by profession, is pulling the trend towards comedy literature. Its first attempt was a collection of humorous poems called ‘Bolayana’. Engaged in various genres of literature, he has participated in state level essay competition and won prizes. Originally serving as a primary teacher in Soraba taluk of Shimoga district, he is interested in training school teachers, writing, poetry, witty, essay, personality development writing. Apart from writing columns for some newspapers, he has also written articles on environment, education, human relations in many newspapers. There is no doubt that this ‘Bolayana’ collection of witty poems by Intippa Basavanagowda Hebbalagere will make the readers laugh.
Reviews
There are no reviews yet.