Akshara Mattu Akasha

200.00
Categories: ,
Author: Radhakrishna K Uliyatadka
ಸಾಮಾಜಿಕ ಮೌಲ್ಯಗಳು, ನೀತಿ-ನಿಯಮಗಳು ಅಧಃಪತನವಾಗುತ್ತಿರುವ ಕಾಲಘಟ್ಟದಲ್ಲಿ ಅವುಗಳನ್ನು ಎತ್ತಿ ಹಿಡಿದು ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಹೊಂದಿದವರು ಕಾಸರಗೋಡಿನ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಬಹುಭಾಷೆ, ಬಹು ಸಂಸ್ಕೃತಿಯ ನೆಲೆಯ ಸಂಗಮವಾಗಿರುವ ಕಾಸರಗೋಡು ಕನ್ನಡ-ಮಲೆಯಾಳಿ ಭಾಷಿಕರ ಪ್ರಿಯವಾದ ತಾಣ. ಅನುಭವ, ಅನುಭಾವಗಳ ನೆಲೆಯಲ್ಲಿ ಕಲಾರಾಧನೆಯೂ ಇಲ್ಲಿನ ಪ್ರಮುಖ ಅಂಶ. ಸಂವೇದನಾಶೀಲ ಕವಿ, ಸಾಮಾಜಿಕ ಕಾಳಜಿಯ ಪತ್ರಕರ್ತ, ಸರ್ವರ ಏಳಿಗೆಯ ಸಂಘಟಕರಾಗಿ ದಶಕಗಳಿಗೂ ಹೆಚ್ಚು ಕಾಲದಿಂದ ದುಡಿಯುತ್ತಿರುವವರು ರಾಧಾಕೃಷ್ಣ ಕೆ ಉಳಿಯತ್ತಡ್ಕ, ಸೌಮ್ಯ ವ್ಯಕ್ತಿತ್ವದ ಇವರ ಸಾಹಿತ್ಯಾಧ್ಯಯನ ವ್ಯಾಪ್ತಿ ದೊಡ್ಡದು. ಸಾಮಾಜಿಕವಾಗಿ, ಆರ್ಥಿಕವಾಗಿ ತಮ್ಮ ಪೂರ್ವಿಕರು ತುಳಿತಕ್ಕೊಳಗಾಗಿದ್ದರೂ ಅದನ್ನು ಮೆಟ್ಟಿನಿಂತು ಸಾಧನೆಯ ಧ್ವಜ ಹಾರಿಸಿದ ಉಳಿಯತ್ತಡ್ಕ ಅವರ ತಂದೆ ಸೈನ್ಯದಲ್ಲಿದ್ದರು. ತಾಯಿ ಗುರು-ಶಿಕ್ಷಕಿ. ಸಾಂಸ್ಕೃತಿಕ ವಾತಾವರಣ ಸಹಜವಾಗೇ ಅವರಿಗೆ ದಕ್ಕಿತು.
ಸಾಹಿತ್ಯಾಸಕ್ತಿಯಿಂದ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ಇವರು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ದುಡಿದಿದ್ದರು. ಕಾಸರಗೋಡಿನಿಂದ ಪ್ರಕಟವಾಗುವ ಹಲವು ಕನ್ನಡ ಪತ್ರಿಕೆಗಳ ಬೆಳವಣಿಗೆಗೂ ಸಹಕಾರಿ ಆದರು. ಕೇರಳ ಕರ್ನಾಟಕದ ನಡುವೆ ಸಾಂಸ್ಕೃತಿಕ ರಾಯಭಾರಿಯಾದರು. ರಾಧಾಕೃಷ್ಣ ಅವರು ಉತ್ತಮ ಕವಿತೆ ಹೇಗೋ ಅಷ್ಟೇ ಸೊಗಸಾಗಿ ಗದ್ಯ ಸಾಹಿತ್ಯವನ್ನೂ ರೂಢಿಸಿಕೊಂಡವರು. ಪ್ರಸ್ತುತ ಕೃತಿಯಲ್ಲಿ ಅವರ ಹಲವು ಬರಹಗಳು ಗಮನಾರ್ಹ. ಅಧ್ಯಯನಶೀಲತೆಯಿಂದ ಕೃತಿಗೆ ಮೌಲ್ಯ ಪ್ರಾಪ್ತವಾಗಿದೆ. ದುಡಿಮೆಯನ್ನು ಕಾವ್ಯದ ದನಿಯಾಗಿಸಿದ ಕವಿ ಹೋರಾಟಗಾರ ಕಯ್ಯಾರ ಕಿಞ್ಞಣ್ಣ ರೈ ಬಗ್ಗೆ ಅರ್ಥಪೂರ್ಣವಾಗಿ ಬರೆದಿದ್ದರೆ; ಕನ್ನಡ ದಲಿತ ಸಾಹಿತ್ಯದ ಬಗ್ಗೆ ಹಲವು ಒಳನೋಟ ಬೀರಿ, ಅನೇಕ ಕೃತಿಗಳ ಅವಲೋಕನ ಮಾಡಿದ್ದಾರೆ. ಎಂಭತ್ತರ ದಶಕದಿಂದ ಇಲ್ಲಿಯವರೆಗಿನ ದೀರ್ಘ ಪಯಣದಲ್ಲಿ ಕಾವ್ಯ, ಸಾಹಿತ್ಯ, ಸಮೀಕ್ಷೆ, ವ್ಯಕ್ತಿಚಿತ್ರ, ಸಂದರ್ಶನ, ಸಂಪಾದನೆಯಲ್ಲಿ ವೈವಿಧ್ಯತೆಯ ಇಪ್ಪತ್ತಕ್ಕೂ ಹೆಚ್ಚು ಕೃತಿಗಳಲ್ಲಿ ಕೃಷಿ ನಡೆಸಿರುವ ರಾಧಾಕೃಷ್ಣಉಳಿಯತ್ತಡ್ಕರ ಈ ಕೃತಿ ಸರಳ ಹಾಗೂ ಸುಂದರ ಚೌಕಟ್ಟು ನಿರ್ಮಿಸಿದೆ.

 

 

At a time when social values ​​and norms are deteriorating, the one who is responsible for upholding them and maintaining the health of the society is Radhakrishna K Sulanthadaka of Kasaragod.
Being a multi-lingual, multi-cultural confluence, Kasaragod is a favorite destination for Kannada-Malay speakers, and art worship is also an important factor here in terms of experiences and experiences. Radhakrishna K Sulanthadaka, a sensitive poet, social concern journalist, and activist for the welfare of all, has been working for more than a decade. Even though his forefathers were socially and economically oppressed, he stood up and raised the flag of achievement. His father was in the army. His mother was a guru-teacher, and the cultural environment naturally suited him.
He entered journalism with literary interest and worked in leading Kannada newspapers. He also contributed to the development of many Kannada newspapers published from Kasaragod. He became a cultural ambassador between Kerala and Karnataka. Radhakrishna is the master of good poetry as well as prose literature. Many of his writings are notable in the present work. The work is valued by the studiousness. If the poet who made labor the voice of poetry has written meaningfully about the fighter Kayyara Kinnanna Rai; He has given many insights into Kannada Dalit literature and reviewed many works. This work of Radhakrishna Salanthadakar, who has cultivated in more than twenty works of diversity in poetry, literature, survey, portrait, interview, editing, in a long journey from the eighties till now, has built a simple and beautiful framework.

Reviews

There are no reviews yet.

Only logged in customers who have purchased this product may leave a review.