Adrushtada Minu

120.00
Categories: ,
Author: Suresh Vagga
120.00

ಗುಳೇದಗುಡ್ಡದ ಕ್ರಿಯಾಶೀಲ ಮಿತ್ರರಾದ ಶ್ರೀ ಸುರೇಶ ವಗ್ಗಾ ಅವರದು ಬಹುಮುಖಿ ವ್ಯಕ್ತಿತ್ವ, ಪ್ರತಿಕಾ ಸಂಪಾದಕರಾಗಿ,
ಪತ್ರಕರ್ತರಾಗಿ, ಛಾಯಾಚಿತ್ರಗ್ರಾಹಕರಾಗಿ, ಹವ್ಯಾಸಿ

ಅದೃಷ್ಟದ ಮೀನು
ಕಾರ್ಟೂನಿಷ್ಠರಾಗಿ,ಲೇಖಕರಾಗಿ, ಕಥೆಗಾರರಾಗಿ ಬರವಣಿಗೆಯಲ್ಲಿ ಅಪಾರವಾದ ಅನುಭವದಿಂದ ಪ್ರಸಿದ್ದಿ ಪಡೆದವರು. ಕಳೆದ ಎರಡು ದಶಕಗಳಿಂದ ಕಥೆ, ಹನಿಗವನ, ಸಂದರ್ಶನ ಲೇಖನ, ನುಡಿಚಿತ್ರ ರಚನೆಗಳಲ್ಲಿ ಸಂವೇದನಾಶೀಲರಾಗಿ ಬರೆಯುತ್ತ ಬಂದವರು. ಸುರೇಶ ಅವರ
ಮಕ್ಕಳಕತೆಗಳು ಈಗಾಗಲೇ ಬಹುದಿನಗಳಿಂದ ನಾಡಿನ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಬೆಳಕು ಕಂಡಿವೆ.
ಈಗ ಸಧ್ಯ ಸುರೇಶ ಅವರ ಚೊಚ್ಚಲ ಕೃತಿ ‘ಅದೃಷ್ಟದ ಮೀನು’ ಎಂಬ ಮಕ್ಕಳ ಕಥಾ ಸಂಕಲನ ಪ್ರಕಾಶಿತಗೊಳ್ಳುತ್ತಿರುವುದು ಸಂತೋಷದ, ಅಭಿಮಾನದ ಸಂಗತಿಯಾಗಿದೆ. ಸುರೇಶ ಅವರ ಈ ಸಂಕಲನದ ಕಥೆಗಳಲ್ಲಿ ಪ್ರಾಣಿ, ಪಕ್ಷಿ ಪ್ರಪಂಚವೇ ತೆರೆದುಕೊಂಡಿದೆ. ತುಂಬ ಸರಳವಾದ, ಹದವಾದ, ಹಿತಮಿತವಾದ ಭಾಷೆಯ ಬಳಕೆ ಹಾಗೂ ನಿರೂಪಣೆ ಅಪ್ಯಾಯಮಾನವಾಗಿ ಚೆಲ್ಲುವರಿದಿದೆ. ಮಕ್ಕಳ ಮನಸ್ಸಿಗೆ ಮುದ ನೀಡುವ ಇಷ್ಟವಾದ, ಸುಲಲಿತವಾದ ಕಥೆಗಳು ಇಲ್ಲಿ ತುಂಬಿಕೊಂಡಿವೆ. ಈ ಸಂಕಲನದ ವೈಶಿಷ್ಟ್ಯವೆನೆಂದರೆ, ಪ್ರತಿ ಕತೆಗೂ ಸುಂದರವಾದ ಚಿತ್ರಗಳನ್ನು ಸಂಯೋಜಿಸಿರುವುದು ಔಚಿತ್ಯಪೂರ್ಣವೆನಿಸಿದೆ. ಇದರಿಂದಾಗಿ ಕೃತಿಯು ಸೊಗಸಾಗಿ, ಸುಂದರವಾಗಿ, ಪರಿಣಾಮಕಾರಿ ಎನಿಸಿದೆ. ಇಲ್ಲಿನ ಕಥೆಗಳಲ್ಲಿ ಹೊಸತನವಿದೆ, ನೀತಿಯಿಂದ ಕೂಡಿವೆ. ಮಾನವೀಯ ಮೌಲ್ಯಗಳಿಂದ ಹೊಸ ಹೊಳವಿನ ಸೆಳೆತವಿದೆ. ಮಕ್ಕಳಿಗೆ ಕುತೂಹಲ ಹುಟ್ಟಿಸಿ ಬೇರೊಂದು ಲೋಕಕ್ಕೆ ಸೆಳೆದೊಯ್ಯುವ ಗುಣ ಪ್ರಾಪ್ತವಾಗಿದೆ. ಮಕ್ಕಳನ್ನು ಸನ್ಮಾರ್ಗಕ್ಕೆ ಹಚ್ಚುವ ಶಕ್ತಿ ಈ ಕಥೆಗಳಿಗಿದೆ. ಎಲ್ಲ ವಯೋಮಾನದವರಿಗೂ ಕುತೂಹಲ ಮತ್ತು ಆಸಕ್ತಿಯನ್ನು ಹುಟ್ಟಿಸುವಲ್ಲಿ ಕಥೆಗಳು ಯಶಸ್ವಿಯಾಗಿವೆಯೆಂದೇ ಹೇಳಬಹುದು. ಇಲ್ಲಿನ ಕಥೆಗಳನ್ನು ಓದುತ್ತಿದ್ದಂತೆಯೇ ಪಂಚತಂತ್ರದ ಕಥೆಗಳು ನೆನಪಾಗುತ್ತವೆ. ಇಂತಹ ಅಪರೂಪದ ಮಕ್ಕಳ ಮನಸ್ಸನ್ನು ಅರಳಿಸಿ ರಸಾನಂದ ನೀಡುವ ಅದೃಷ್ಟದ ಕಥೆಗಳನ್ನು ನೀಡಿದ ಸುರೇಶ ವಗ್ಗಾ ಅವರಿಂದ ಇನ್ನಷ್ಟು, ಮತ್ತಷ್ಟು ಕೃತಿಗಳು ಹರಿದು ಬರಲಿ ಎಂದು ಹೃದಯಾರೆ ಹಾರೈಸಿ, ಅಭಿನಂದಿಸುತ್ತೇನೆ.

Mr. Suresh, an active friend of Guledagudda
Wagga is a multi-faceted personality, as a graphic editor,
As a journalist, photographer, hobbyist
Lucky fish
He is famous for his vast experience in writing as a cartoonist, writer and storyteller. He has been sensitively writing stories, short stories, interview articles and films for the past two decades. Suresh’s children’s stories have already seen light in the daily, weekly and monthly newspapers of the country.
Now Sadhya Suresha’s debut work is a children’s story called ‘Adrishta Niu’
It is a matter of pleasure and admiration that the anthology is being published. In the stories of Suresh’s collection, the world of animals and birds is revealed. Very simple, gentle, gentle use of language and narration is horribly sloppy. Here are full of lovable, simple stories that will please children. A feature of this anthology is that each story is accompanied by beautiful pictures. This makes the work elegant, beautiful and effective. The stories here are innovative and ethical. There is a new wave of human values. It has the ability to arouse children’s curiosity and take them to another world. These stories have the power to set children on the right path. It can be said that the stories are successful in generating curiosity and interest among all age groups. While reading the stories here, one remembers the stories of Panchatantra.
I sincerely wish and congratulate Suresh Wagga for giving such rare children’s mind-blowing stories of good luck for more and more works to come.

Reviews

There are no reviews yet.

Only logged in customers who have purchased this product may leave a review.