SPB

300.00
Author: Bhadravati RamachariS. Taranath Bhadravathi
SPB
300.00

 

 

ನಾದಬ್ರಹ್ಮ
ಹಂಸಲೇಖನ
ಮನದ ಮುನ್ನುಡಿ
ವಿದ್ಯಾಧಿ ದೇವತೆ
ಪುರುಷರೂಪಿನಿಂದ
ಸಂಗೀತ ಸಾಹಿತ್ಯ ಸರಸ್ವತಿಯೇ
ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ
ಆಗಿರಬೇಕೆಂಬುದು ನನ್ನ ಊಹೆ. ಈ ಮಾತಿಗೆ ಕಾರಣವಿಲ್ಲದೆ ಇಲ್ಲ.
ಪ್ರಧಾನ ಸಂಪಾದಕರು:
ಡಾ. ಭದ್ರಾವತಿ ರಾಮಾಚಾರಿ
ಎಸ್. ತಾರಾನಾಥ್ ಭದ್ರಾವತಿ
ಒಂದು ದಿನದಲ್ಲಿ ಇಪ್ಪತ್ತು ಹಾಡುಗಳನ್ನು ಹಾಡುವುದು, ತನ್ನ
ಜೀವಮಾನದಲ್ಲಿ 47,000 ಹಾಡುಗಳನ್ನು ಅನೇಕ ಭಾಷೆಗಳಲ್ಲಿ
ಹಾಡುವುದು, ಜೊತೆ ಜೊತೆಗೆ ತಾನೇ ಸಂಗೀತ ನಿರ್ದೇಶನ
ಮಾಡುವುದು, ಚಿತ್ರಗಳಲ್ಲಿ ಅಭಿನಯಿಸುವುದು-ಇದು ಸಾಲದೆಂದು
ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ
ಸಂಗೀತ ಸಂಜೆಗಳನ್ನು ಏರ್ಪಡಿಸಿ ಒಂದು ಕಾರ್ಯಕ್ರಮದಲ್ಲಿ ಕನಿಷ್ಠ
30 ಹಾಡುಗಳನ್ನು ಸ್ವತಃ ಹಾಡುವುದು, ಬೇರೆ ಬೇರೆ ಭಾಷೆಯ ಶ್ರೇಷ್ಠ
ಕಲಾವಿದರಿಗೆ ಕಂಠದಾನ ಮಾಡುವುದು ಹಾಗೂ ತಾನೂ ಸ್ವತಃ ಚಿತ್ರ
ನಿರ್ಮಾಪಕನಾಗಿ ಅತ್ಯುತ್ತಮ ಅಭಿರುಚಿಯ ಚಿತ್ರಗಳನ್ನು
ನಿರ್ಮಿಸುವುದು ಹೀಗೆ ತಮ್ಮ ಬಹುಮುಖ ಪ್ರತಿಭೆಯನ್ನು
ಮುನ್ನೂರರವತ್ತೈದು ದಿನಗಳೂ ತೊಡಗಿಸಿಕೊಳ್ಳುವುದು ನಿಜಕ್ಕೂ
ವಿಸ್ಮಯ. ಇಂಥ ಅತ್ಯದ್ಭುತ ವ್ಯಕ್ತಿತ್ವದ ಪ್ರತಿಭೆಯನ್ನು ನಾನು ಕಂಡದ್ದು
ನಮ್ಮ ನೆಲೆಯ ‘ಬಾಲು’ ಅವರಲ್ಲಿ! ಎಸ್ ಪಿಬಿ ಅವರಲ್ಲಿ!!
ಶ್ರದ್ದೆ, ವಿನಯ, ಜೀವನೋತ್ಸಾಹ, ಮಹತ್ವಾಕಾಂಕ್ಷಿ, ಹಿರಿಯರಲ್ಲಿ
ಗೌರವ ತೋರುವ ವಿಧೇಯತೆ, ಸ್ನೇಹ ಪ್ರೀತಿ, ವಿಶ್ವಾಸಗಳ ಸಂಗಮ
ನಮ್ಮೆಲ್ಲರ ನೆಚ್ಚಿನ ಜಗದ್ವಿಖ್ಯಾತ ಗಾಯಕ ಎಸ್‌ಪಿಬಿ ಅವರ
ಅದ್ವಿತೀಯ ವ್ಯಕ್ತಿತ್ವದಲ್ಲಿ. ಅಸೀಮ ಸಾಹಸ, ಅದ್ವಿತೀಯ
ಕಾರ್ಯಸಾಧನೆ, ಅನಂತ ರೀತಿಯ ಜನಪ್ರಿಯತೆ, ಅಪೂರ್ವ
ಬಗೆಯ ಹೊಂದಾಣಿಕೆ ಈ ಎಲ್ಲವೂ ಸೇರಿದ “ಅಜಾತಶತ್ರುವೇ ಡಾ.
ಎಸ್.ಪಿ. ಬಾಲಸುಬ್ರಹ್ಮಣ್ಯಂ.
ಬಣ್ಣನೆಗೆ ಎಟುಕದ, ಅಸಾಧಾರಣ ಮಾನವ ನಮ್ಮ ನಿಮ್ಮೆಲ್ಲರ
ಅಚ್ಚುಮೆಚ್ಚಿನ ಗಾಯಕ ಎಸ್ ಪಿ ಬಿ ಅವರ ಬಗೆಗೆ ಶ್ರದ್ಧೆ, ಭಕ್ತಿ,
ಅಭಿಮಾನ, ಗೌರವಭಾವ, ನಿಬ್ಬೆರಗಿನ ನೋಟಪಡೆದ ಸಾಹಿತಿ,
ಪ್ರಕಾಶಕ ಶ್ರೀ ಭದ್ರಾವತಿ ರಾಮಾಚಾರಿ ಅವರ ಈ ಬಗೆಯ ಸಾಹಿತ್ಯದ
ಸಂಗೀತದ ಆರಾಧನೆಯ ದ್ಯೋತಕ ಈ ಮಹತ್ವದ ಕೃತಿ.

 

Saraswati, Goddess of Vidyadhi, music, literature, in male form, Dr. S.P. My guess is Balasubrahmanyam. This saying is not without reason.
Editor-in-Chief: Dr. Bhadravati Ramachari
S. Taranath Bhadravati

Singing twenty songs in a day, singing 47,000 songs in many languages ​​in his lifetime, directing music on his own, acting in films – this is a credit to organizing international music evenings in different countries of the world and singing at least 30 songs in one program, lending his voice to great artistes in different languages. It is truly amazing to engage his multifaceted talent for three hundred and forty five days and produce films of excellent taste as a filmmaker himself. I saw the talent of such a wonderful personality in our local ‘Balu’! SPB among them!!

Diligence, Humility, Enthusiasm, Ambition, Respectful Obedience to Elders, Friendly Love, Confluence of Trusts in the unique personality of our all favorite world famous singer SPB, boundless adventure, unique achievements, endless popularity, unique compatibility all these are “Ajatasatru’ve Dr.S”. .P. Balasubrahmanyam.
An indescribable, extraordinary human being, our beloved singer SPB, this important work is an expression of devotion, devotion, admiration, respect, deep-looked literature, the worship of this kind of literature and music by the publisher Shri Bhadravati Ramachari.
Dr. Doddarange Gowda Padma Shri awardee.

Reviews

There are no reviews yet.

Only logged in customers who have purchased this product may leave a review.