ಸಾಹಿತ್ಯ ಸುಮ ಪ್ರಶಸ್ತಿ ಪಡೆದ ಮೊದಲ ಕೃತಿ
ಈ ಗ್ರಂಥದ ಕೇಂದ್ರ ಬಿಂದುವಾದ ಅಲ್ಲಮನಿಗೆ ಸಂಬಂಧಿಸಿದ ಕಾಲಮಾನ, ಚಾರಿತ್ರಿಕ ಸಂಗತಿ, ವಚನ ಸಾಹಿತ್ಯ, ಯೋಗಸಿದ್ಧಿ, ಸಹಶರಣರ ದೃಷ್ಟಿ, ಇತ್ಯಾದಿಗಳ ಜೊತೆಗೆ ಸಂದರ್ಭೋಚಿತವಾಗಿ ಇತರ ಲೋಕದಾರ್ಶನಿಕರೊಡನೆ ತುಲನ ಈ ಅಂತಗಳನ್ನೆಲ್ಲ ಡಾ. ವಿಜಯಾದೇವಿ ಅವರು ಸಾಧಾರವಾಗಿ ನಿರೂಪಿಸಿದ್ದಾರೆ. ಇದು ಪೂರ್ಣಾರ್ಥದಲ್ಲಿ ಒಂದು ಸಮರ್ಥ ಸಂಶೋಧನ ಗ್ರಂಥ. ಈ ಗ್ರಂಥ ಅಲ್ಲಮನನ್ನು ಕುರಿತ ಉಳಿದ ಗ್ರಂಥಗಳಿಗಿಂತ ಭಿನ್ನವಾಗಿ, ವಿಶೇಷವಾಗಿ, ವಿಶಿಷ್ಟವಾಗಿ ನಿಲ್ಲುತ್ತದೆಂದು ನಾನು ತಿಳಿದಿದ್ದೇನೆ. ಇದಕ್ಕೆ ಕಾರಣ, ಅಲ್ಲಮನ ಬಗೆಗಿನ ರೂಢಿಗತ ಮಾಹಿತಿಗೆ ಹೊರತಾಗಿ, ಇಲ್ಲಿ ನಮ್ಮನ್ನು ಹೊಸ ಚಿಂತನೆಗೆ ಒಯ್ಯುವ ಸಂಗತಿಗಳಿರುವುದು. ಲೋಕ ವಿಸ್ಮಯವೆನಿಸಿರುವ ಆತ್ಮಜ್ಞಾನಿ ಅಲ್ಲಮಪ್ರಭುವನ್ನು ಕುರಿತ ಮತ್ತು ಮತ್ತಷ್ಟು ಚಿಂತನೆಗೆ ಪ್ರೇರಣೆ ನೀಡುವ ಇಂತಹ ಸಂಶೋಧನಾತ್ಮಕ ಮತ್ತು ಗಂಭೀರ ವಿಚಾರಪೂರ್ಣ ಗ್ರಂಥವನ್ನು ಕನ್ನಡ ಸಾಹಿತ್ಯ ಭಂಡಾರಕ್ಕೆ, ಆ ಮೂಲಕ ಶರಣ ಸಾಹಿತ್ಯ ಕಣಜಕ್ಕೆ ಕೊಟ್ಟಿರುವ ಡಾ. ವಿಜಯಾದೇವಿ ಅವರನ್ನು ಅಭಿನಂದಿಸುತ್ತೇನೆ.
-ಗೊ.ರು. ಚನ್ನಬಸಪ್ಪ
ಗೌರವ ಅಧ್ಯಕ್ಷರು, ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತು
ಡಾ. ವಿಜಯಾದೇವಿ ಅವರ ಸಂಶೋಧನಾ ಕೃತಿಯಾದ’ ಅಲ್ಲಮಪ್ರಭು ದೇವರು; ಚರಿತ್ರೆ, ಸಂಸ್ಕೃತಿ, ಜ್ಞಾನದ ನೆಲೆಗಳು’ ಬಹು ಶಿಸ್ತೀಯ ಆಕರಗಳನ್ನು ಅನುಲಕ್ಷಿಸಿ, ಬಹುಮುಖೀ ಆದ ನೆಲೆಯಲ್ಲಿ ಪ್ರಸ್ತುತ ಅಧ್ಯಯನ ಬೆಳೆದಿರುವುದು ಇದರ ವಿಶಿಷ್ಟತೆಯಾಗಿದೆ. ಅಲ್ಲಮನನ್ನು ಕುರಿತ ಒಂದು ಹೊಸ ವಿಚಾರ ಈ ಅಧ್ಯಯನದಲ್ಲಿ ಮೊದಲ ಬಾರಿಗೆ ಗುರುತರವಾಗಿ ಕಾಣುತ್ತದೆ. ಅದು ಆತ ರಾಜನಾಗಿದ್ದನೆಂಬುದು ಅಲ್ಲಮನ ಅನೇಕ ಗದ್ದುಗೆಗಳು ಸ್ಮಾರಕಗಳು ಇಲ್ಲಿ ಮಾತನಾಡುವುದನ್ನು ನೋಡಿದರೆ ಜನಪದೀಕರಣಗೊಂಡ ನೆಲೆಯಲ್ಲಿ ಜನರನ್ನು ವ್ಯಾಪಕವಾಗಿ ತಲುಪಿದುದು ಕಾಣುತ್ತದೆ. ಜನತೆ ಮತ್ತು ಪ್ರಭುತ್ವ ಎರಡೂ ನೆಲೆಗಳಲ್ಲಿ ಜ್ಞಾನ ಮತ್ತು ಅನುಭವಗಳನ್ನ ದಕ್ಕಿಸಿಕೊಂಡ ಅಲ್ಲಮ ತನ್ನ ಕಾಲಕ್ಕೆ ಪ್ರಸ್ತುತವಾದಂತೆ ನಮ್ಮ ಕಾಲಕ್ಕೂ ಪ್ರಸ್ತುತವಾಗಿದ್ದಾನೆ. ಹಲವು ನಿಟ್ಟಿನ ಮಹತ್ವವನ್ನುಳ್ಳ ಅಲ್ಲಮನಂತಹ ಜ್ಞಾನನಿಧಿಗಳ ಅರಿಯುವಿಕೆಗೆ ಇಂತಹ ವಿದ್ವತ್ತೂರ್ಣ ಕೃತಿಗಳು ಅವಶ್ಯಕವಾಗಿವೆ, ಅಂತಹ ಅವಶ್ಯಕತೆಯೊಂದನ್ನು ಪ್ರಸ್ತುತ ಕೃತಿ ಪೂರೈಸಿದೆ. ಅದಕ್ಕಾಗಿ ಡಾ. ವಿಜಯಾದೇವಿ ಅವರನ್ನು ಅಭಿನಂದಿಸುವೆ.
-ಡಾ. ಕಾ. ವೆಂ. ಶ್ರೀನಿವಾಸಮೂರ್ತಿ, ಬೆಂಗಳೂರು ವಿಶ್ವವಿದ್ಯಾಲಯ
ಅಕ್ಕ ಡಾ.ವಿಜಯದೇವಿ ಅವರ “ಅಲ್ಲಮ ಪ್ರಭು ದೇವರು: ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು” ಕೃತಿಯು ಅನೇಕ ಹೊಸ ವಿಚಾರಗಳನ್ನು ಶೋಧಿಸಿ ನಮ್ಮ ಅರಿವು-ಅನುಭವಗಳನ್ನು ವಿಸ್ತರಿಸುವಂಥ ಕೃತಿಯಾಗಿದೆ. ಹಲವು ಚರ್ಚೆಗಳನ್ನು ಹುಟ್ಟು ಹಾಕುತ್ತದೆ. ಜ್ಞಾನದ ಮಂಥನವನ್ನು ನಿರಂತರವಾಗಿಸುತ್ತದೆ. ಅಲ್ಲಮಪ್ರಭು ದೇವರು ನಟುವರ ಮನೆತನದವರಲ್ಲ, ಅರಸು ಮನೆತನದವರು ಎಂದು ಪ್ರತಿಪಾದಿಸಿರುವುದು ವಿಶೇಷವಾದ ಅಂಶವಾಗಿದೆ?… ಪ್ರಭುದೇವರು ನಿರ್ಮಿಸಿರುವ ಅಳಿಯದೆ ಕೂಡುವ ಆತ್ಮದ ಮಹಾಮಾರ್ಗವನ್ನು ಕುರಿತು ಸೊಗಸಾಗಿ ವಿವರಿಸಿದ್ದಾರೆ. “ಹೊಸ ರಸದ ಅಮೃತವನು ಓಸರಿಸಿ ದಣಿಯುಂಡ ತೃಪ್ತಿಯಿಂದ ಸುಖಿಯಾದೆ ಗುಹೇಶ್ವರಾ” ಎಂಬ ಅಲ್ಲಮನ ಅರಿವು, ಯೋಗಸಾಧನೆ, ಅನುಭಾವದಮೃತಗಳನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲಮ ನನ್ನು ಬುದ್ಧ, ಮಹಾವೀರ, ಸಾಕ್ರಟೀಸರೊಂದಿಗೆ ತುಲನೆ ಮಾಡಿ ಜ್ಞಾನದ ಅನಂತ ವಿಸ್ತಾರದ ವೈತ್ರಿಕ ಸ್ವರೂಪವನ್ನು ಮನದಟ್ಟು ಮಾಡಿದ್ದಾರೆ. ಒಟ್ಟಾರೆ ಈ ಕೃತಿ ಅಲ್ಲಮನ ಕುರಿತ ಹೊಸ ಅರಿವು ಹಾಗೂ
ಅನುಭವಗಳನ್ನು ಕಟ್ಟಿಕೊಡುತ್ತದೆ. ಡಾ.ವಿಜಯದೇವಿ ಅವರಿಗೆ ತುಂಬು ಹೃದಯದ ವಂದನೆಗಳು..
First work to win Sahitya Suma Award
Along with the central point of this book, Allamani, historical facts, scriptures, Yogasiddhi, Sahasaran’s vision, etc., Dr. Vijayadevi has narrated it simply. It is a competent research work in its entirety. I know that this book stands apart from other books on Allama, especially, uniquely. This is because, apart from the usual information about Allama, there are things here that take us to a new way of thinking. Dr. Dr. Allama Prabhu, a worldly awestruck spiritual man, who has given such a research-minded and serious and thought-provoking book to the Kannada Sahitya Bhandara and thereby to the Sharan Sahitya Kanaja. Congratulations Vijayadevi.
-Go.s. Channabasappa Honorary President, All India Saranasahitya Parishad
Dr. Vijayadevi’s research work ‘Allamaprabhu God; It is unique in that the current study has developed in a multidisciplinary framework, observing the multi-disciplinary sources of history, culture, knowledge bases. A new idea about Allama appears for the first time in this study. That he was a king. Allama’s many gaduges-monuments that speak here seem to have reached the masses in a popularized setting. Not only did he gain knowledge and experience in both the people and the government, but he is also relevant to our time as he was relevant to his time. Such scholarly works are necessary for the realization of knowledge sources like Allam, which have many practical significance. One such requirement is fulfilled by the -Dr. Ka. Ven. Srinivasamurthy, Bangalore University
Akka Dr.Vijayadevi’s work “Allama Prabhu Deva: History, Culture, Searches of Knowledge” is a work that explores many new ideas and expands our knowledge and experiences. It raises many debates. Continual churning of knowledge. It is a special point that Allama Prabhu has asserted that God is not from the family of actors, but from the family of kings?… Prabhudeva has beautifully described the highway of immortality of the soul. Allama’s awareness, yoga practice, and anubhavadamrita have tied “Guheshwara, who drank the nectar of new juice and became satisfied with exhaustion.” Allama has been compared with Buddha, Mahavira, Socrates and has emphasized the vast nature of the infinite breadth of knowledge. Overall this work gives new knowledge and experiences about Allama. Heartfelt greetings to Dr. Vijayadevi..
Allama Prabhudeva.. History, Culture, Quests of Knowledge
Only logged in customers who have purchased this product may leave a review.
Reviews
There are no reviews yet.