Vivasha

400.00
Categories: ,
Author: Gururaj Sunil Udupi
400.00
ದಿವಂಗತ ಕದಂಬ ರಿ
ಗುರುರಾಜ್ ಸನಿಲ್ ಉಡುಪಿ
ಶ್ರೀ ಗುರುರಾಜ್ ಸನಿಲ್ ಅವರೊಬ್ಬ ಖ್ಯಾತ ಉರಗತಜ್ಞ ಮತ್ತು ಸಾಹಿತಿಯಾಗಿ
ನಾಡಿನಾದ್ಯಂತ ಪ್ರಸಿದ್ಧರು. ಇವರು ತಮ್ಮ ವಿಶೇಷ ಜೀವನಾನುಭವಗಳಿಂದ ಈವರೆಗೆ
ಹತ್ತು ವಿಭಿನ್ನ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯಲೋಕಕ್ಕೆ ಮಹತ್ವದ ಕೊಡುಗೆ
ನೀಡಿದವರು. ‘ಹಾವು ನಾವು (ಪರಿಷ್ಕೃತ ಮೂರು ಆವೃತ್ತಿಗಳು)’ ‘ದೇವರಹಾವು
ನಂಬಿಕೆ, ವಾಸ್ತವ’ ‘ನಾಗಬೀದಿಯೊಳಗಿಂದ’ ‘ಹುತ್ತದ ಸುತ್ತಮುತ್ತ’ ‘ವಿಷಯಾಂತರ’
‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ‘ನಾಗಬನವೆಂಬ ಸ್ವರ್ಗೀಯ ತಾಣ’ ಎಂಬ
ಕೃತಿಗಳೊಂದಿಗೆ ಕಥೆಗಾರರೂ ಆಗಿ ‘ಗುಡಿ ಮತ್ತು ಬಂದ” ಕಥಾಸಂಕಲನ ಹಾಗೂ
‘ವಿವಶ’ ಮತ್ತು ‘ಆವರ್ತನ’ ಕಾದಂಬರಿಗಳನ್ನು ಬರೆದು ಕಾದಂಬರಿಕಾರಾಗಿಯೂ
ಗುರುತಿಸಿಕೊಂಡಿದ್ದಾರೆ. ‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ
2010ನೇ ಸಾಲಿನ, ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ
ಲಭಿಸಿದೆ.
“ನಾಗಬೀದಿಯೊಳಗಿಂದ” ಕೃತಿಯ ‘ನಮ್ಮ ನಂಬಿಕೆ ನಾಗನಿಗೆ ವರವೇ, ಶಾಪವೇ?’
ಎಂಬ ಮುಖ್ಯ ಲೇಖನವು ಮಂಗಳೂರು ವಿಶ್ವವಿದ್ಯಾನಿಲಯದ 2017ರ ಪ್ರಥಮ ಬಿ.
ಕಾಂ. ವಿದ್ಯಾರ್ಥಿಗಳಿಗೆ ಹತ್ತನೆಯ ಪಠ್ಯವಾಗಿದೆ. ಶ್ರೀಯುತರ ಅಧ್ಯಯನ ಮತ್ತು
ಚಿಂತನೆಗಳು ಡಾಕ್ಟರೇಟ್ ಪದವಿಗೆ ಅರ್ಹವಾಗಿರುವಷ್ಟು ಉನ್ನತವಾಗಿರುವುದರಿಂದಲೇ,
‘ಕರುಣಾ ಎನಿಮಲ್ ವೆಲ್ ಫೇರ್ ಅವಾರ್ಡ್(2004)’ ಅರಣ್ಯ ಇಲಾಖೆಯ ‘ಅರಣ್ಯ
ಮಿತ್ರ(2013)’ ಕರ್ನಾಟಕ ಕಾರ್ಮಿಕ ವೇದಿಕೆಯ, ‘ಕರ್ನಾಟಕ ರಾಜ್ಯೋತ್ಸವ
ಪ್ರಶಸ್ತಿ(2016)’ ಸರಕಾರ ಕೊಡಮಾಡುವ, ‘ಉಡುಪಿಜಿಲ್ಲಾ ಕನ್ನಡ ರಾಜ್ಯೋತ್ಸವ
ಪ್ರಶಸ್ತಿ(2016), ಸೌತ್ ಕೆನರಾ ಫೋಟೋಗ್ರಾಫರ್ ಅಸೋಸೀಯೆಷನ್ ಸಂಸ್ಥೆಯ
‘ಉರಗ ಮಿತ್ರ (2017), ಹೊನ್ನಾವರದ ಕೃಷ್ಣಾನಂದ ಕಾಮತ ಪ್ರತಿಷ್ಠಾನವು ‘ಕೃಷ್ಣಾನಂದ
ಕಾಮತ್ ಸಾಹಿತ್ಯ ಪ್ರಶಸ್ತಿ(2018)’ ಹಾಗೂ ಉಡುಪಿಜಿಲ್ಲಾ ವರ್ತಕರ ಹಿತರಕ್ಷಣಾ
ವೇದಿಕೆಯು, ಸೇವಾರತ್ನ(2018) ಎಂಬ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದೆ.
ಸನಿಲ್ ಅವರ ನಾಲ್ಕು ಕೃತಿಗಳಿಂದ ಆಯ್ದ 18 ಲೇಖನಗಳು ಗೋವಾದ ಲೇಖಕಿ ಡಾ.
ಸುಷಮಾ ಆರೂರು ಅವರಿಂದ ಕೊಂಕಣಿ ಭಾಷೆ(ದೇವನಾಗರಿ ಲಿಪಿ)ಗೆ
ಅನುವಾದಗೊಂಡು, ‘ಗಜಾಲಿ ಹೊಟಸರ್ಯಾ೦: ಸರ್ಪ ಮೊಗಿಡೆ ಆಣಭವ!’
ಎಂಬ ಕೃತಿಯ ರೂಪದಲ್ಲಿ 2020ರಲ್ಲಿ ಬೆಳಕು ಕಂಡಿದೆ.
ಹಸಿರು ಪರಿಸರದ ಕುರಿತು ಅಪಾರ ಕಾಳಜಿಯಿಂದ ಹುಟ್ಟಿಕೊಂಡ ‘ನಮ್ಮ ಮನೆ ನಮ್ಮ
ಮಠ’ ಎಂಬ ಅಭಿಯಾನ ತಂಡದ ಮುಖ್ಯ ಸದಸ್ಯರಾಗಿರುವ ಶ್ರೀಯುತರು ಈವರೆಗೆ
15000ಕ್ಕೂ ಮಿಕ್ಕ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಕಳೆದ 38 ವರ್ಷಗಳಿಂದ 26
ಸಾವಿರಕ್ಕೂ ಮಿಕ್ಕ ಹಾವುಗಳನ್ನು ಸಂರಕ್ಷಿಸುತ್ತ ಬಂದ ಸಂದರ್ಭಗಳಲ್ಲಿ ಹದಿಮೂರು
ಬಾರಿ ವಿಷದ ಹಾವುಗಳ ಕಡಿತಕ್ಕೂ ಒಳಗಾಗಿ ಒಮ್ಮೆ ಕೆಲವು ದಿನಗಳ ಕಾಲ ‘ಕೋಮಾ’
ಸ್ಥಿತಿಯಲ್ಲಿದ್ದು ಬಂದಿದ್ದರೂ ಧೃತಿಗೆಡದೆ ಪರಿಸರ ಮತ್ತು ಉರಗ ಜೀವಿಗಳ ಕುರಿತು

ಜನಜಾಗ್ರತಿ ಮೂಡಿಸುತ್ತ ಪ್ರಸ್ತುತ ಉಡುಪಿಯ ಹುತ್ತೂರಿನಲ್ಲಿ ವಾಸವಿದ್ದಾರೆ.

Late Kadamba Ri
Gururaj Sanil Udupi

Shri Gururaj Sanil is a famous urologist and a writer who is famous all over the country. He has written ten different works from his special life experiences and has contributed significantly to Kannada literature. ‘Snake We (Revised Three Editions)’ ‘God Snake Truth, Truth’ ‘From within the Snake Street’ ‘Around the Surroundings’ ‘Context’ ‘Kamarida Satyas Chigurita News’ ‘Heavenly Place of Nagabanam’ as a storyteller with ‘Gudi and Banda’ story anthology and ‘Vivasha’ And also recognized as a novelist by writing ‘Avarthana’ novels. The work ‘Havu Namu’ received the ‘Madhurchenna Dattinidhi Book Award’ of Karnataka Sahitya Akademi in 2010. ‘Is our faith a blessing or a curse to the Naga?’ Main article Mangalore University 2017 First B. Com. It is the tenth text for students. Sriyutha’s studies and thoughts are so high that he deserves a doctorate degree, ‘Karuna Animal Welfare Award(2004)’ Forest Department’s ‘Aranya Mitra(2013)’ Karnataka Labor Forum, ‘Karnataka Rajyotsav Award(2016)’ Govt., ‘Udupi Zilla Kannada Rajyotsav Award(2016) ), South Canara Photographer Association’s ‘Urag Mitra’ (2017), Honnavara’s Krishnananda Kamath Literary Award (2018) and Udupi District Traders’ Welfare Forum, ‘Sevaratna’ (2018). 18 articles selected from Sanil’s four works by Goan author Dr. Translated into Konkani (Devanagari script) by Sushma Aroor, ‘Ghazali Hotasaryanche: Sarha Mogide Anabhava!’ It has seen the light in 2020 in the form of a work.

Being the main member of the campaign team ‘Namma Mane Namma Mara’, born out of great concern for the green environment, Sriyuth has so far planted more than 15000 saplings. In the past 38 years, he has been protecting more than 26 thousand snakes and has been bitten by poisonous snakes thirteen times. He was in a ‘coma’ state for a few days.

Reviews

There are no reviews yet.

Only logged in customers who have purchased this product may leave a review.