Supta Sadhakaru

250.00
Categories: ,
Author: Suresh Guduga
250.00
ಸುಪ್ತ ಸಾಧಕರು ಇಲ್ಲಿರುವ ಅರ್ಧದಷ್ಟು ಲೇಖನಗಳನ್ನು
ಓದಿದ್ದೇನೆ. ಎಲ್ಲ ಲೇಖನಗಳನ್ನು ಓದುವ ವ್ಯವಧಾನ
ಇಲ್ಲದ್ದರಿಂದ ಓದು ಬಿಟ್ಟು ಮುನ್ನುಡಿಯನ್ನು ಬರೆಯಲು
ಕುಳಿತಿದ್ದೇನೆ. ಈ ಅರವತ್ತು ಲೇಖನಗಳಲ್ಲಿ ಹೆಚ್ಚು ಹೆಚ್ಚಾಗಿ
ಮಹಿಳೆಯರು ಎಲ್ಲ ದೃಷ್ಟಿಯಿಂದಲೂ ವಂಚಿತ
ಸಮುದಾಯವೇ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದುಕೊಂಡು
ತಮ್ಮನ್ನು ಬೆಳೆಸಿಕೊಂಡ ರೀತಿ ನಿಜವಾಗಲೂ ಕುತೂಹಲಕಾರಿ!
ವ್ಯಷ್ಟಿಯಿಂದ ಸಮಷ್ಟಿಯತ್ತ ಹೊರಟ ಇವರಲ್ಲಿ ಅಪಾರವಾದ
ಸಾಮಾಜಿಕ ಕಳಕಳಿ ಇದೆ, ನಿಷ್ಠೆ ಇದೆ. ಲೇಖಕರು
ಆಯ್ದುಕೊಂಡ ಈ ವ್ಯಕ್ತಿಗಳಲ್ಲಿರುವ ಸೇವಾಭಾವನೆ
ಲೇಖಕರನ್ನು ಆಕರ್ಷಿಸಿರಬೇಕು. ಅವರು ಮಲ್ಲಮ್ಮ ಯಾಳವಾರ
ಇರಲಿ, ವಿಜಯಲಕ್ಷ್ಮೀ ಕುಲಗೋಡ ಇರಲಿ, ಅನ್ನಪೂರ್ಣ
ಇರಲಿ, ಸಿದ್ದು ರಾಮತೀರ್ಥವರೇ ಇರಲಿ ಇವರೆಲ್ಲ ಶೂನ್ಯ
ಸ್ಥಿತಿಯಿಂದ ಹೊರಟು ತಮ್ಮ ಸಾಧನೆಯಲ್ಲಿ ಶಿಖರ
ಏರಿದವರು!! ಗಮನಿಸಬೇಕಾದ ಸಂಗತಿಯೆಂದರೆ- ಅದು ಕೃಷಿ
ಕ್ಷೇತ್ರವಿರಲಿ, ಶಿಕ್ಷಣವಿರಲಿ, ಕಲೆ ಇರಲಿ – ಹತ್ತು ಹಲವು
ಸಾಧಕರನ್ನು ಹುಡುಕಿಕೊಂಡು ಲೇಖಕರು ಅಲೆದದ್ದನ್ನು ನಾವು
ಅಭಿನಂದಿಸಲೇಬೇಕು. ಸುರೇಶ ಗುದಗನವರಲ್ಲಿರುವ
ಸಾಮಾಜಿಕ ಕಾಳಜಿಯು ಗುಡ್ಡದಷ್ಟು ದೊಡ್ಡದು. ಆ
ಕಳಕಳಿಯೇ ಇವರನ್ನು ಅರವತ್ತು ಲೇಖನಗಳನ್ನು ಕೈ ನೀಡಿ
ಕರೆದು ಬರೆಸಿರಬೇಕು ಎಂದೆನಿಸುತ್ತದೆ.
-ಮಾಲತಿ ಪಟ್ಟಣಶೆಟ್ಟಿ

 

 

I have read half of the articles on here by the latent pros. I did not bother to read all the articles, so I sat down to write the introduction. In these sixty articles mostly women are deprived community in all aspects. It is really interesting how they raised themselves to be ordinary among ordinary people! They have a lot of social concern and loyalty among them who have gone from Vyashti to Samashti. The sense of service in these persons selected by the author must have attracted the author. Whether they are Mallamma Yalavara, Vijayalakshmi Kulgoda, Annapurna, Siddu Ramatheertha, all of them have risen from the zero state and reached the pinnacle of their achievements!! It is worth noting that – be it in the field of agriculture, education, art – we must congratulate the author for searching for dozens of achievers. Suresh Gudaga’s social concern is as big as a hill. It seems that this concern must have prompted him to write sixty articles. -Malathi Patnashetty

Reviews

There are no reviews yet.

Only logged in customers who have purchased this product may leave a review.