Olavina Runa

180.00
Categories: ,
Author: Kumar Bhadravathi
180.00
‘ಒಲವಿನ ಋಣ’ ಎಂಬ ಭಾವುಕ, ಅಷ್ಟೇ ಚಂದದ ಶೀರ್ಷಿಕೆಯುಳ್ಳ ಈ
ಕಾದಂಬರಿ ಲೇಖಕ ಕುಮಾರ್ ಭದ್ರಾವತಿಯವರ ನವಿರಾದ ನಿರೂಪಣೆಯಲ್ಲಿ
ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಹೆಣ್ಣೆಂಬ ಮಹಾತಾಯಿಯ
ಜವಾಬ್ದಾರಿಯುತ ಕಥನವನ್ನು ಅಷ್ಟೇ ಆಪ್ತತೆಯಿಂದ ಸರಳತೆಯ
ಚೌಕಟ್ಟಿನೊಳಗೆ ಏಕಾಗ್ರತೆಯಿಂದ ಕಟ್ಟಿಕೊಡುವಲ್ಲಿ ಜಯಭೇರಿ ಹೊಡೆದಿದ್ದಾರೆ
ಎಂದರೆ ಅದು ಸಿನಿಕತನವೆಂದು ಅನ್ನಿಸದು. ಕಾದಂಬರಿಯನ್ನು ಲೇಖಕರನ್ನು
ವಿವರಿಸುತ್ತಾ ಸಾಗಿದರೆ ಹೊಗಳಿಕೆ ಎಂಬ ಹೊನ್ನ ಶೂಲಕ್ಕೆ ಏರಿಸಿಬಿಟ್ಟೇನೆಂಬ
ಆರೋಪಕ್ಕೆ ನಾನು ಗುರಿಯಾಗ ಬಹುದೇನೋ ಎಂಬ ಆತಂಕ ನನ್ನನ್ನು
ಅವರಿಸಿರುವುದು ದಿಟ.
ಗೆಳೆಯ, ಆಪ್ತ, ಹಠಮಾರಿ, ಧೈರ್ಯವಂತ, ಹೃದಯವಂತನಾದ ಲೇಖಕ
ಕುಮಾರ್ ಭದ್ರಾವತಿಗೂ ನನಗೂ ಬರೋಬ್ಬರಿ ಮೂವತ್ತ ನಾಲ್ಕು ವರ್ಷದ
ಗೆಳೆತನ. ಅವಮಾನವನ್ನು ಅನುಮಾನಿಸದೆ, ಕ್ರೂರ ದಿನಗಳನ್ನು ಗಣನೆಗೆ
ತೆಗೆದುಕೊಳ್ಳದೆ, ಹಸಿವನ್ನು ಹಿಮ್ಮೆಟ್ಟಿ ನೀರಿನೊಂದಿಗೆ ಕಳೆಯುತ್ತ ಇಬ್ಬರ
ಕಾಲಿಗೂ ಪಾಠ ಕಲಿಸಿದ್ದೇವೆ. ನೈಜತೆಗೂ ಗಾವುದ ದೂರದ ಘಟನೆಗಳು
ನಮ್ಮಿಬ್ಬರ ಬದುಕಲ್ಲಿ ಪ್ರವೇಶಿಸಿದಾಗಲೂ ನಾವು ಆಸಹನೆಗೆ ಅಂಟಿಕೊಳ್ಳದೆ
ಬದುಕಿಗೇ ಸವಾಲೆಸೆಯುತ್ತ ಸಾಗಿದವರು.
This novel with the emotional yet beautiful title of ‘Olavina Rana’ is an easy read in author Kumar Bhadravati’s tender narration. Jayabheri has succeeded in tying the responsible story of the female great grandmother into a framework of simplicity with such closeness that it does not feel cynical. I was worried that if I went on describing the author of the novel, I might be accused of being a compliment.
Friend, confidant, stubborn, brave and hearty author Kumar Bhadravati and I have been friends for almost thirty four years. Without suspecting dishonor, without taking into account the cruel days, we have taught both feet a lesson by retreating from hunger and spending time with water. Even when far-fetched events entered our lives, we did not hold on to hope and continued to challenge life.

Reviews

There are no reviews yet.

Only logged in customers who have purchased this product may leave a review.