Nee Mudida Mallige

500.00
Categories: ,
Author: N. Ganesh
500.00
ಸಾದ ಉಡಾಫೆಯಂತೆ ಕಾಣುವ ಪಲ್ಲವಿ ಹಣಕಾಸಿನ ಬಗ್ಗೆ. ಆರ್ಥಿಕ ಪರಿಸ್ಥಿತಿಯ ಬಗ್ಗೆ ಇಷ್ಟೆಲ್ಲಾ ಆಲೋಚಿಸಿರುವಳಲ್ಲ. ಹೆಣ್ಣಾದ ಅವಳೇ ತಲೆ ಕಿಡಿಸಿಕೊಂಡಿರುವಾಗ ಮುಂದೆ ಸಂಸಾರದ ರಥ ನಡೆಸಬೇಕಾಗಿರುವ ತಾನು ಅದೇಕೆ ಉದಾಸೀನ ಮಾಡಿ ಸುಮ್ಮನಿದ್ದೇನೆ? ಇವತ್ತೇ ಅಪ್ಪಯ್ಯನ ವ್ಯವಹಾರಗಳ ಬಗ್ಗೆ ಕೇಳಬೇಕು ಎಂದುಕೊಂಡನು. ವಿನಾಯಕ ಮೌನವಾಗಿರುವುದನ್ನು ಕಂಡು ಪಲ್ಲವಿ, “ಮಾವ… ಇದನ್ನೆಲ್ಲಾ ನನ್ನ ಅಮ್ಮನ ಮುಂದೆ ಹೇಳಿ ಅವಳ ತಲೆ ಕೆಡಿಸಬೇಡಿ. ಆಲೋಚಿಸುವ ಶಕ್ತಿಯಿದ್ದರೆ ಈಗಲಾದರೂ ಎಚ್ಚೆತ್ತುಕೋ. ನಾನಂತೂ ಸಧ್ಯಕ್ಕೆ ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳೋಲ್ಲ. ನನಗಾಗಿ ಹಂಬಲಿಸಬೇಡ.” ವಿನಾಯಕನಿಗೆ ಒಂದು ಕ್ಷಣ ನಿರಾಸೆಯಾದರೂ ಎಚ್ಚೆತ್ತುಕೊಂಡು, “ಪಲ್ಲವಿ… ಮದುವೆಯ ವಿಷಯ ಹಾಗಿರಲಿ. ಮೊದಲು ಅಪ್ಪಯ್ಯನ ಕುದುರೆ ರೇಸಿನ ಬಗ್ಗೆ ನಿನಗೆ ಹೇಗೆ ಗೊತ್ತಾಯಿತು ಅಂತ ಹೇಳು.” “ನನ್ನ ಗೆಳೆತಿ ತಂದೆಯಿಂದ.” “ಅಂದರೆ…” “ನನ್ನ ಗೆಳತಿಯ ತಂದೆ ಸಹ ಕುದುರೆ ರೇಸಿಗೆ ಹೋಗುತ್ತಾರೆ. ಅವರಿಗೆ ತಾತನ ಪರಿಚಯವಿದೆ. ತಾತನನ್ನು ತುಂಬಾ ಸಲ ಅಲ್ಲಿ ನೋಡಿದ್ದಾರಂತೆ.” ವಿನಾಯಕ ಹೊರಡುತ್ತಾ, “ನಾನು ಬತಿನಿ ಪಲ್ಲವಿ. ಬಹುಶಃ ಸಧ್ಯಕ್ಕೆ ನಿನ್ನನ್ನು ನೋಡಲು ಬರಲಾರೆ.” ನೀ ಮುಡಿದ ಮಲ್ಲಿಗೆ ಪಲ್ಲವಿ ಭಯದಿಂದ, ನಾನು ಹೀಗೆ ಅಂದೆ ಅಂತ ಕೋಪ ಬಂತ
ಮಾವ?” “ಇಲ್ಲ, ಜ್ಞಾನೋದಯವಾಯಿತು.” ಪಲ್ಲವಿ ಸಹ ಗಂಭೀರವಾಗಿ, “ಮದುವೆ ಅನ್ನೋದು ದೊಡ್ಡವರ ಬಲವಂತಕ್ಕೆ
ನಡೆಯುವಂತಹ ಯಾಂತ್ರಿಕ ಕ್ರಿಯೆ ಆಗಬಾರದು. ಎರಡು ಮನಸ್ಸುಗಳೂ ಮೊದಲು ಬೆರೆಯಬೇಕು. ನಂತರ ಸಂಪ್ರದಾಯದ ನಿಯಮಕ್ಕೆ ಬದ್ಧರಾಗಿ ಮದುವೆ ಮಾಡಿಕೊಂಡರಾಯಿತು. ಗಂಡು-ಹೆಣ್ಣು ಒಂದೇ ಸೂರಿನಡಿ, ಒಟ್ಟಿಗೆ ಬಾಳಲು ಮದುವೆ ಅನ್ನೋ ಹೆಸರಿನಲ್ಲಿ ಸಮಾಜ ನೀಡುವ ಲೈಸನ್ಸ್ ಅದು.”ವಿನಾಯಕ ಅವಳ ಕಡೆ ಬೆರಗಾಗಿ ನೋಡುತ್ತಿದ್ದಾನೆ.
ಅವನಿಗೆ ಅನಿಸಿತು, ‘ಯಾರದ್ದೋ ಬಲವಂತಕ್ಕೆ ತನ್ನ ಕತ್ತನ್ನು ಬಗ್ಗಿಸಿ ನನ್ನಿಂದ ತಳಿ ಕಟ್ಟಿಸಿಕೊಳ್ಳುವ ಹೆಣ್ಣಲ್ಲ. ಇವಳನ್ನು ಗೆಲ್ಲುವುದು ಹುಡುಗಾಟವಲ್ಲ. ಅವಳ ನಿರೀಕ್ಷೆಯಂತೆ ನಾನು ಬೆಳೆಯದಿದ್ದರೆ, ಬದಲಾಗದಿದ್ದರೆ ಅವಳು ಮುಲಾಜಿಲ್ಲದೆ ನನ್ನನ್ನು ತಿರಸ್ಕರಿಸುತ್ತಾಳೆ.’

 

The refrain that looks like a sada udafe is about finance. She has not thought so much about the financial situation. Why is she, who has to lead the chariot of the family, indifferent and silent when she is a woman? He thought that he should ask about Appaiah’s affairs today.
Seeing Vinayak silent, Pallavi said, “Father-in-law… tell all this in front of my mother and don’t upset her. If you have the power to think, wake up now. Don’t worry about marriage just now either. Don’t yearn for me.”
Vinayaka was disappointed for a moment but woke up and said, “Pallavi… Let the matter of marriage be like that. First tell me how you came to know about Appaiah’s horse race.” “From my 9 girlfriend’s father.” “I mean…” “My girlfriend’s father also goes to the horse races. He knows his grandfather. He’s seen him there many times.” Vinayak left, “I am Bartini Pallavi. I may not come to see you now.”
Pallavi got angry because of fear, I said this, father-in-law?” “No, enlightened.” Pallavi is also serious, “Marriage should not be a mechanical act forced by adults. Two minds must first be united. Then they got married by adhering to the rules of tradition. It is a license given by society in the name of marriage to live together under one roof.” Vinayak is looking at her in amazement. He felt, ‘She is not a woman who will bend her neck to force me. It is not a game to win her over. If I do not grow as she expects, she will reject me without hesitation.’
You are the best Jasmine.

Reviews

There are no reviews yet.

Only logged in customers who have purchased this product may leave a review.