Hai Doni

320.00
Categories: ,
Author: Laxman Kodase
320.00
ಹಾಯಿದೋಣಿ’ಯ ಬರಹಗಳು ಕಿರುಹಣತೆಗಳಂಥ ಪುಟ್ಟ
(ಪದ್ಯಗಂಧಿ) ಪ್ರಬಂಧಗಳೇ ಸರಿ. ಸಿಪಿಕೆ. ಮೈಸೂರು ಸಾಪ್ತಾಹಿಕ ಪುರವಣಿಯಲ್ಲಿ ಸೇರ್ಪಡೆಯಾಗಿರುವ ಲಕ್ಷ್ಮಣ ಕೊಡಸೆಯವರ ಅಂಕಣ ‘ಹಾಯಿದೋಣಿ” ಬರವಣಿಗೆ ತುಂಬಾ ಆಕರ್ಷಕವಾಗಿ ಮೂಡಿ ಬರುತ್ತಿದೆ. ಕೊಡಸೆಯವರ ಖಾಸಗಿ ಬದುಕಿನ ಗ್ರಹಿಕೆಗಳು, ಹಾಯಿದೋಣಿ ಮೂಲಕ ಕಲಾತ್ಮಕ ಲೇಪವನ್ನು ಪಡೆದುಕೊಂಡು ಸಾರ್ವತ್ರಿಕಗೊಂಡು ನಮ್ಮೆಲ್ಲರ ಅನುಭವಗಳಾಗುತ್ತಿವೆ. ಲೇಖನಕ್ಕೆ ನೀಡುವ ಶೀರ್ಷಿಕೆಗಳೂ ಸಹ ಕಾವ್ಯಾತ್ಮಕವಾಗಿ ಕಂಗೊಳಿಸುತ್ತವೆ. ‘ಹರೆಯ: ನೆಲ ಕಂಡವರಾರು?’ (ಸಾ. ಪು. ಏ. 12) ಲೇಖನದಲ್ಲಿ ಕೊಡಸೆಯವರು ಓರ್ವ ವೃತ್ತಿಪರ ಮನೋವಿಜ್ಞಾನಿಯಾಗಿ ನಮ್ಮೆದುರು ಆಪ್ತ ಸಲಹೆ ನೀಡುತ್ತಿದ್ದಾರೇನೋ ಎಂಬ ಭಾವನೆ ಮೂಡುತ್ತದೆ. ಕೊಡಸೆಯವರ ಹಾಯಿದೋಣಿ
ನಿರಂತರವಾಗಿ ಮುಂದೆ ಸಾಗುತ್ತಿರಲಿ.
ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ
ಕೊಡಸೆ ಅವರ ಒಳನೋಟ ಹಾಯಿದೋಣಿಯನ್ನು ಭಿನ್ನವಾಗಿಸಿದೆ.
ಅಂಕಣಗಳು ಬೌದ್ಧಿಕ ಕಸರತ್ತಿನಂತೆ ಕಾಣುತ್ತಿರುವ ಈ ದಿನಗಳಲ್ಲಿ ಕೊಡಸೆ
ಅವರು ತಮಗೆ ಎದುರಾದ ಪುಟ್ಟ ಘಟನೆಯನ್ನೇ ಬೇಕಾದರೆ
ಎಲೆಯಾಗಿಟ್ಟುಕೊಂಡು ದೊಡ್ಡ ಜಾಗತೀಕರಣವನ್ನು ಮಂಡಿಸುತ್ತಾರೆ.
ಜಿ.ಎನ್.ಮೋಹನ್
ಹಾಯಿದೋಣಿ ನನಗೆ ತುಂಬ ಖುಷಿ ನೀಡುವ ಬರಹ. ಶಿವಮೊಗ್ಗದಲ್ಲಿ
ಹನ್ನೆರಡು ವರ್ಷ ಇದ್ದೆ. ಆಗ ಓಡಾಡಿದ ಹೊಸನಗರ, ನಗರ, ತೀರ್ಥಹಳ್ಳಿ,
ಕುಪ್ಪಳಿ, ಸಾಗರ, ಶಿವಮೊಗ್ಗದ ನೆನಪುಗಳೆಲ್ಲ ಹಾಯಿದೋಣಿಯಲ್ಲಿ ಕುಳಿತು
ಮೆಲುಕು ಹಾಕುವಂತೆ ಮಾಡಿವೆ. ಮಲೆನಾಡಿನ ಮಳೆ, ಮನೆ, ಮನ, ಗದ್ದೆ.
ಬದುವುಗಳೆಲ್ಲ ಹಾಯಿದೋಣಿಯಲ್ಲಿ ಸಾಗುತ್ತಿವೆ. ಬಾಲ್ಯದ ಅದೆಷ್ಟೋ
ಅನುಭವಗಳು ಇನ್ನೂ ಹಚ್ಚ ಹಸಿರಾಗಿರುವುದು ಖಂಡಿತಾ ಬೆರಗು ಹುಟ್ಟಿಸಿದೆ.
ಮಗಳು, ಶಾಲೆ, ಪಠ್ಯ, ಪರೀಕ್ಷೆಗಳ ದಡದಲ್ಲಿರುವ ನಮಗೆ ಆ ದಡದ ಗದ್ದೆ.
ಬೀಜ, ಬತ್ತ, ಅಡಿಕೆ, ತೆಂಗುಗಳಿಗೆ ತಲುಪಿಸುವ ತವಕಗಳಿಗೆ ನಿಮ್ಮ
ದೋಣಿಯೇ ಬೇಕು. ಕಳೆದು ಹೋಗುತ್ತಿರುವ ನಮ್ಮ ತಲೆಮಾರಿಗೆ
ಹಾಯಿದೋಣಿ ಹಂಗಾಮು ತರಬಲ್ಲದು.
The writings of ‘Haidoni’ are like short (poetry Gandhi) essays.
CPK. Laxman Kodase’s column ‘Haidoni” written in the Mysore weekly supplement is very attractive.
Even the titles given to the article are poetic. ‘Harey: Who saw the ground?’ (Sa. P. A. 12) In the article, we feel that Kodase is giving us intimate advice as a professional psychologist. May Kodase’s sailboat keep moving forward.
Dr. Mallikarjuna Kalamarahalli
Kodase’s insight made the sailboat different. In these days when columns seem like an intellectual exercise, Kodase uses the small incident he encountered as a leaf to present the big globalization.
GN Mohan
Sailboat is a piece of writing that makes me very happy. I was in Shimoga for twelve years. The memories of Hosanagar, Nagar, Tirthahalli, Kuppali, Sagara, Shimoga that I used to travel around then made me sit in the sailboat and reminisce. Mountain rain, house, mind, field. All lives are sailing on a sailboat. It must be amazing that so many childhood experiences are still alive and well. Daughter, school, school, exams are on the banks of that shore field for us. Your boat is needed for delivery of seeds, paddy, nuts, coconuts. A sailing boat can bring a season to our lost generation.

Reviews

There are no reviews yet.

Only logged in customers who have purchased this product may leave a review.