ಸೋನಾ ಮಸೂರಿ ಅಕ್ಕಿ ಮತ್ತು ಹಾಸ್ಯ ಚಕ್ರವರ್ತಿ ಗಂಗಾವತಿಯ ಪ್ರಾಣೇಶ್ ಅವರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿಯು ಹೇಗೆ ಪ್ರಸಿದ್ದವೋ ಹಾಗೆ ಸಾಹಿತಿ ಶ್ರೀ ರಾಘವೇಂದ್ರ ಮಂಗಳೂರು ಅವರ ನ್ಯಾನೋ ಕಥೆಗಳು ವಿಡಂಬನೆಗಳಿಗೆ ಪ್ರಸಿದ್ಧ. ರಾಘವೇಂದ್ರ ಅವರು ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾಗಿರುವರಾದರೂ ಪ್ರವೃತ್ತಿಯಲ್ಲಿ ಚಲನಶೀಲ
. ಆಡು ಮುಟ್ಟದ ಗಿಡವಿಲ್ಲ ಎಂಬಂತೆ ರಾಘವೇಂದ್ರ ಮಂಗಳೂರು ಅವರು ಮುಟ್ಟದ ಸಾಹಿತ್ಯದ ಪ್ರಕಾರಗಳಿಲ್ಲ. ಕಥೆ, ಕಾದಂಬರಿ, ನ್ಯಾನೋ ಕಥೆಗಳು, ವಿಡಂಬನೆ, ಹಾಸ್ಯ ಲೇಖನಗಳಲ್ಲಿ ರಾಘವೇಂದ್ರ ಮಂಗಳೂರು
ಅವರದು ಸಿದ್ಧ ಹಸ್ತ. ಸಾವಿರದ ಒಂಭೈನೂರಾ ಎಂಭತ್ತು, ತೊಂಭತ್ತರ ದಶಕಗಳಲ್ಲಿ ಇವರ ಅನೇಕ ಕಥೆಗಳು
ಹಾಸ್ಯ/ವಿಡಂಬನೆ ಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಪ್ರಜಾಮತ, ತರಂಗ, ಇಂಚರ, ಸಂಯಕ್ತ ಕರ್ನಾಟಕ, ಕನ್ನಡ
ಪ್ರಭ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮೆಚ್ಚುಗೆ ಗಳಿಸಿದ್ದು ಇದೆ. ಬ್ಯಾಂಕಲ್ಲಿ ಅಧಿಕಾರಿಯಾಗಿ ಬಡ್ತಿ ಹೊಂದಿದ ನಂತರ ಸಾಹಿತ್ಯ ಕೃಷಿ ತುಸು ಕುಂಠಿತಗೊಂಡರೂ ನಿವೃತ್ತಿಯ ನಂತರ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಪುಟಿದೆದ್ದು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ನ್ಯಾನೋ ಕಥೆಗಳು ಮತ್ತು ವಿಡಂಬನೆಗಳು ಅವರ ಲೇಖನಿಯಿಂದ ಪುಂಖಾನುಪುಂಖವಾಗಿ ಹೊರಹೊಮ್ಮುತ್ತಿವೆ. ಪ್ರಸ್ತುತ ಪ್ರಚಲಿತ ವಿದ್ಯಮಾನಗಳ ಕುರಿತ ಅವರ ಕುತೂಹಲಕಾರಿ
ವಿಡಂಬನೆಗಳು ಓದುಗರ ಮನಸ್ಸನ್ನು ಸೆಳೆಯುತ್ತಿವೆ ಮತ್ತು ರಂಜಿಸುತ್ತಿವೆ. ಹರಿತ ಪಂಚಿಂಗ್ ಡೈಲಾಗ್ಸ್ ಗಳಿಂದ ವಿಜೃಂಭಿಸುತ್ತಿರುವ ಅವರ ವಿಡಂಬನೆಗಳು ಓದುಗರ ಮೆಚ್ಚುಗೆಗೆ ಅರ್ಹವೆನಿಸುತ್ತಿವೆ. ಮುಂದಿನ ದಿನಮಾನಗಳಲ್ಲಿ
ಶ್ರೀರಾಘವೇಂದ್ರ ಮಂಗಳೂರು ಅವರಿಂದ ಇನ್ನೂ ಹಲವಾರು ಸಾಹಿತ್ಯ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಲಿ ಆಶಯದೊಂದಿಗೆ, ఎంబ ರಾಘವೇಂದ್ರ ಮಂಗಳೂರು
Sona Mussoorie is famous for rice and comedy Chakraborty Gangavathy Pranesh as Gangavathy of Koppal district is famous for the nano stories and satires of Sahitya Sri Raghavendra Mangalore. Raghavendra is a retired bank officer but a dynamic literati by nature. There is no genre of literature that Raghavendra Mangalore has not touched, just as there is no plant that a goat has not touched. Raghavendra Mangalore has a ready hand in stories, novels, nano stories, satire and comedy articles.
In the nineteen eighties and nineties, many of his comedy/satire stories were published in the famous newspapers of the country such as Prajamata, Tharanga, Inchara, Sanyakta Karnataka, Kannada Prabha etc. and gained public appreciation. After being promoted as an officer in the bank, literary cultivation declined a bit, but after retirement, he rose again like a phoenix and is engaged in literary cultivation. Currently nano stories and satires are emerging from his pen in full bloom.
His witty satires on current affairs are engaging and entertaining readers. Bursting with sharp punching dialogues, his satires deserve an appreciative readership. Hoping that many more literary works from Sri Raghavendra Mangalore will be offered to the Kannada Saraswat world in the coming days, Mr.
Raghavendra Mangalore
Reviews
There are no reviews yet.