ಶ್ರೀಯುತ ಗುರುರಾಜ ಮಾರ್ಪಳ್ಳಿಯವರ ಐದನೆಯ ಕಾದಂಬರಿ ಅವ್ವ
ನನ್ನವ್ವವು ಅವರ ನಾಟಕವನ್ನು ಆಧರಿಸಿದ್ದಾಗಿದೆ… ಇಂದಿನ ತಂತ್ರಜ್ಞಾನ
ಅಭಿವೃದ್ಧಿಯ ಮಂತ್ರ ತಾಯ್ತನ, ಮತ್ತು ಪ್ರಕೃತಿಯ ವಿನಾಶಕ್ಕೆ
ಕಾರಣವಾಗಿರುವುದನ್ನ ಕಾದಂಬರಿ ವಿಷದಪಡಿಸುತ್ತದೆ…
ಬದುಕು ಎಷ್ಟು ಜಟಿಲವೋ, ಎಷ್ಟು ಸಂಕೀರ್ಣವೋ, ಎಷ್ಟು ಅದ್ಭುತ
ರಹಸ್ಯವೋ ಕಾದಂಬರಿ ಅದಕ್ಕೆ ಹಿಡಿದ ಕನ್ನಡಿ… ಮನುಷ್ಯ
ತೋರಿಸಿಕೊಳ್ಳುವಷ್ಟು ನೇರ, ಸರಳ ಜೀವಿ ಅಲ್ಲ… ಪ್ರತಿಯೊಬ್ಬನ ಬದುಕೂ
ಒಂದು ಕಾದಂಬರಿ… ನಿಜಜೀವನದ ವ್ಯಕ್ತಿಗಳೇ ಪಾತ್ರಗಳಾಗುತ್ತಾರೆ….
ಲೇಖಕ ಸೃಷ್ಟಿಸಿದ ಪಾತ್ರಗಳ ಜೀವಂತಿಕೆ ಕಾದಂಬರಿಯ ಸತ್ವವನ್ನು
ನಿರ್ಧರಿಸುತ್ತದೆ…
ಗುರುರಾಜ ಮಾರ್ಪಳ್ಳಿ ಒಬ್ಬ ವೃತ್ತಿಪರ ಬರಹಗಾರ… ಯಕ್ಷಗಾನ,
ಸಂಗೀತ, ನಾಟಕ ನಿರ್ದೇಶಕರಾಗಿ ರಂಗಭೂಮಿಯ ಆಳವನ್ನು ಸಾಗರದಷ್ಟು
ತಿಳಿದವರು…ಕಲೆ, ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟ್ಯ ಶಿಲ್ಪಗಳ ಕುರಿತು
ಅಧಿಕಾರ ವಾಣಿಯಿಂದ ಮಾತಾಡಬಲ್ಲವರು… ಇವರು ನಿರ್ದೇಶಿಸಿದ ನಾಟಕ
ಸಂಗೀತ ನಿರ್ದೇಶನಗಳಲ್ಲಿ ಪಾಲುಗೊಂಡು ಇವರ ಚಿಂತನೆಗಳ ಗುಣ
ಸ್ವಭಾವಗಳನ್ನು ಅರಿತವನು ನಾನು…ಅವ್ವ ನನ್ನವ್ವ ಕಾದಂಬರಿಯ ಒಳ
ಹೊಕ್ಕು ಪಾತ್ರಗಳನ್ನು ಹಾಸುಹೊಕ್ಕಾಗಿ ನೇಯ್ದ ಮಾರ್ಪಳ್ಳಿಯವರನ್ನು ನಾನು
ಅಭಿನಂದಿಸುತ್ತೇನೆ… ಇವರ ಜತೆ ಕಲೆ, ಸಾಹಿತ್ಯ, ಸಂಗೀತ. ಮುಂತಾದ
ಹಲವು ವಿಚಾರಗಳ ಬಗ್ಗೆ ಚರ್ಚಿಸಿ ಅನುಭವವನ್ನು ಹೆಚ್ಚಿಸಿಕೊಂಡವನು
ನಾನು… ಇವರಿಂದ ಇನ್ನಷ್ಟು ಕೃತಿಗಳು ಬರಲಿ ಎಂಬುದು ನನ್ನ ಹಾರೈಕೆ….
Sriyutha Gururaja Marpalli’s fifth novel Avva Nannavva is based on his play… The novel laments that the mantra of today’s technological development is motherhood, and the reason for the destruction of nature…
No matter how complicated, how complex, how wonderful a mystery life is, a novel is a mirror for it… Man is not a straight and simple creature as shown… Everyone’s life is a novel… Real life people become the characters…. The vitality of the characters created by the author determines the essence of the novel.. .
Gururaja Marpalli is a professional writer…who knows the depth of theater as a Yakshagana, music director and an ocean…who can speak with authority about art, literature, music, painting, dance sculptures… I have participated in the theater music directions directed by him and realized the qualities of his thoughts. …I congratulate Marpalli who weaved the inner core characters of the novel Avva Nannavva into a dream… Art, literature, music with them. I am the one who has gained experience by discussing many issues like… I wish more works from him….
Reviews
There are no reviews yet.